ಜನರಿಗಾಗಿ ವೆಚ್ಚ ಮಾಡಬಾರದೇ?

ಮಂಗಳವಾರ, ಜೂನ್ 18, 2019
24 °C

ಜನರಿಗಾಗಿ ವೆಚ್ಚ ಮಾಡಬಾರದೇ?

Published:
Updated:

ಕರುನಾಡು ಬರದಿಂದ ತತ್ತರಿಸಿರುವಾಗ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಮಾಡಿಸುವ ಅವಶ್ಯಕತೆ ಇದೆಯೇ? ದೇವಸ್ಥಾನಕ್ಕೆ ಭಕ್ತರಿಂದ ಬಂದ ದೇಣಿಗೆಯನ್ನು ಜನರಿಗಾಗಿಯೇ ವೆಚ್ಚ ಮಾಡುವ ಒಳ್ಳೆಯ ಕೆಲಸಗಳು ಏಕೆ ನಡೆಯಬಾರದು? ಕಡುಬಡತನದಿಂದ ಹಸಿವು, ಶಿಕ್ಷಣದಿಂದ ವಂಚಿತರಾಗುತ್ತಿರುವ ಎಷ್ಟೊಂದು ಮಕ್ಕಳಿದ್ದಾರೆ. ಅಂಥವರ ಏಳ್ಗೆಗಾಗಿ ಈ ದೇವಸ್ಥಾನದ ಹಣವನ್ನು  ಉಪಯೋಗಿಸಬಹುದು ಅಲ್ಲವೇ?

ಭಕ್ತಾದಿಗಳ ಕಾಣಿಕೆಯನ್ನು ಜನಸೇವೆಗಾಗಿ ಉಪಯೋಗಿಸುವ ಮಹತ್ವದ ಕೆಲಸದಿಂದ, ಸುಬ್ರಹ್ಮಣ್ಯನಿಗೆ ಚಿನ್ನದ ರಥದಲ್ಲಿ ಮೆರವಣಿಗೆ ಹೋಗುವುದಕ್ಕಿಂತಲೂ ಹೆಚ್ಚು ನೆಮ್ಮದಿ ಸಿಗಬಹುದು. ಹೀಗೇ ಎಲ್ಲ ದೇವಸ್ಥಾನಗಳ ನಿಧಿಗಳನ್ನೂ ಬಡಜನರ ಸೇವೆಗಾಗಿ ಉಪಯೋಗಿಸಿದರೆ, ನಮ್ಮ ದೇಶ ಬಡತನದಿಂದ ಮುಕ್ತಿ ಪಡೆದು ಅತಿ ವೇಗವಾಗಿ ಪ್ರಗತಿಯೆಡೆಗೆ ಸಾಗುವುದು ನಿಶ್ಚಿತ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !