ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಲಿ ಕನ್ನಡ ಯಾವುದು?

Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕನ್ನಡ ಭಾಷಾ ಪ್ರವೀಣರು ಕನ್ನಡಪರ ಹೋರಾಟಗಾರರ ಮೇಲೆಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ಹೋರಾಟಗಾರರ ಬರಹಗಳಲ್ಲಿ ಭಾಷಾ ಶುದ್ಧತೆ ಇಲ್ಲ ಎಂಬುದು ಅವರ ತಕರಾರಿನ ಸಾರಾಂಶ.

ಮಹಾಪ್ರಾಣಗಳಿಗೆ ಬದಲಾಗಿ ಅಲ್ಪಪ್ರಾಣಗಳನ್ನು ಬಳಸುವುದು ಹಾಗೂ ‘ಷ’ ಅಕ್ಷರಕ್ಕೆ ಬದಲಾಗಿ ‘ಶ’ ಅಕ್ಷರವನ್ನು ಬಳಸುವುದು ಅವರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮೊದಲಾದವು ದ್ರಾವಿಡ ಭಾಷೆಗಳಾಗಿವೆ. ದ್ರಾವಿಡ ಭಾಷೆಗಳಲ್ಲಿ ಮಹಾ ಪ್ರಾಣ ಅಕ್ಷರಗಳು ಇಲ್ಲ. ಅಂತೆಯೇ ಷ ಅಕ್ಷರ ಸಹ ಇಲ್ಲ.

1856ರಲ್ಲಿ ಬಂದ ರಾಬರ್ಟ್ ಕಾಲ್ಡ್‌ವೆಲ್‌ರ ‘ಎ ಕಂಪ್ಯಾರಿಟಿವ್‌ ಗ್ರ್ಯಾಮರ್‌ ಆಫ್‌ ದಿ ದ್ರವಿಡಿಯನ್‌ ಲ್ಯಾಂಗ್ವೇಜಸ್‌’ ಎಂಬ ಕೃತಿ ಈ ವಿಚಾರಗಳನ್ನು ಅಧಿಕಾರಯುತವಾಗಿ ಸ್ಥಾಪಿಸಿತು. ಅಲ್ಲಿಯವರೆಗೆ ಕನ್ನಡ ಭಾಷೆಯು ಸಂಸ್ಕೃತಜನ್ಯ ಎಂದೇ ಬಹುತೇಕ ನಂಬಲಾಗಿತ್ತು. ನಾವು ಮಾತನಾಡುವ ಕನ್ನಡದಲ್ಲಿ ಸಹಜವಾಗಿ ಮಹಾಪ್ರಾಣ ಅಕ್ಷರಗಳು ಉಚ್ಚಾರಣೆ ಆಗುವುದಿಲ್ಲ. ಮಹಾಪ್ರಾಣ ಅಕ್ಷರಗಳನ್ನು ಬಳಸುವವರು ಬಳಸಲಿ, ನಮ್ಮ ತಕರಾರಿಲ್ಲ. ಆದರೆ ಬಳಸದೇ ಇರುವವರನ್ನು ಅವಮಾನಿಸುವುದು ತಾಯಿ ಭಾಷೆಗೆ ಮಾಡಿದ ದ್ರೋಹವೇ ಸರಿ.

-ಗಿರೀಶ್ ಮತ್ತೇರ,ಹೊದಿಗೆರೆ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT