ಸೋಮವಾರ, ಜೂನ್ 27, 2022
28 °C

‘ಸರ್ಕಾರಿ ವೈದ್ಯ’ರಿಗೊಂದು ಕೋಟಾ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ತೀವ್ರ ಕೊರತೆ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲೇ ಹಲವು ವೈದ್ಯರ ಹುದ್ದೆಗಳು ಖಾಲಿ ಇವೆ. ಇನ್ನು ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಂತೂ ಕೇಳುವುದೇ ಬೇಡ. ಲಕ್ಷಾಂತರ ರೂಪಾಯಿ ಸಂಬಳ ನೀಡುತ್ತೇವೆಂದರೂ ವೈದ್ಯರು ಕೆಲಸಕ್ಕೆ ಬರುತ್ತಿಲ್ಲ. ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಲಾಗಿದ್ದರೂ ಇಂತಹ ಪರಿಸ್ಥಿತಿ ಇದೆ.

ವೈದ್ಯಕೀಯ ಕೋರ್ಸ್‌ನಲ್ಲಿಯೇ ‘ಸರ್ಕಾರಿ ವೈದ್ಯರ ಹುದ್ದೆ’ಗಳಿಗೆ ಎಂದು ಕೋಟಾ ನಿಗದಿಪಡಿಸಿದರೆ ಈ ಸಮಸ್ಯೆಗೆ ಸ್ವಲ್ಪಮಟ್ಟಿಗೆ ಪರಿಹಾರ ಸಿಗಬಹುದೇನೊ. ಪ್ರತಿವರ್ಷ ವೈದ್ಯಕೀಯ ಪದವಿಯ ಸೀಟ್‍ಗಳಲ್ಲಿ ಸರ್ಕಾರಿ ವೈದ್ಯರ ಹುದ್ದೆಗೆಂದೇ ಪ್ರತೀ ಕಾಲೇಜಿಗೆ ಕನಿಷ್ಠ ಒಂದು ಸೀಟ್ ಮೀಸಲಿರಿಸಿದರೂ ಐದು ವರ್ಷಗಳ ನಂತರ ಪ್ರತಿವರ್ಷ 30–40 ವೈದ್ಯರು ಸರ್ಕಾರಿ ಸೇವೆಗೆ ದೊರಕುತ್ತಾರೆ. ಆ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆದು ಬಂದವರು ಕಡ್ಡಾಯವಾಗಿ ಕೇವಲ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಾಗಬೇಕು. ಸ್ವಲ್ಪ ವರ್ಷಗಳ ಸೇವೆಯ ಬಳಿಕ ಸ್ನಾತಕೋತ್ತರ ಪದವಿಗೆ ಕೂಡ ಅವಕಾಶ ಕಲ್ಪಿಸಬಹುದು. ಈ ಕೋಟಾದಲ್ಲಿ ಎಲ್ಲರಿಗೂ ಆಸಕ್ತಿ ಇಲ್ಲದಿದ್ದರೂ ಯಾರಾದರೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಂತೂ ಖಂಡಿತ ಬರುತ್ತಾರೆ. ಈ ದಿಸೆಯಲ್ಲಿ ಸರ್ಕಾರ ಯೋಚಿಸಿ ಸೂಕ್ತ ಕ್ರಮ ಕೈಗೊಂಡರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಗೆ ಪರಿಹಾರ ಸಿಗಬಹುದೇನೊ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು