ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇ ಶಿಕ್ಷಣದ ಕೇಂದ್ರಬಿಂದು ಆಗಲಿ

Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿ ನಿರಂಜನಾರಾಧ್ಯ ವಿ.ಪಿ. ಅವರು ಬರೆದಿರುವ (ಸಂಗತ, ಫೆ. 7) ವಿಚಾರಕ್ಕೆ ಪೂರಕವಾಗಿ ಕೆಲ ವಿಷಯಗಳನ್ನು
ಸೇರಿಸಬಯಸುತ್ತೇನೆ. ಶಿಕ್ಷಣ ವ್ಯವಸ್ಥೆಯ ಪ್ರತೀ ಹಂತವೂ ಕಡ್ಡಾಯವಾಗಿ ಮಗುಕೇಂದ್ರಿತವಾಗಿಯೇ ರೂಪಿತವಾಗಬೇಕು. ಆದರೆ ಇದುವರೆಗೆ ಮಗುವಿಗೆ ಅಸಮಾನತೆಯು ಪೂರ್ವಪ್ರಾಥಮಿಕ ಶಿಕ್ಷಣದ ಹಂತದಲ್ಲೇ
ಪ್ರಾರಂಭವಾಗುವಂತೆ ಮಾಡಿರುವುದು, ಪ್ರಭುತ್ವವು ವ್ಯವಸ್ಥಿತವಾಗಿ ಮಕ್ಕಳಿಗೆ ಮಾಡುತ್ತಿರುವ ದ್ರೋಹ! ಇದಕ್ಕೆ ಬಲಿಪಶು ಆಗಿರುವವರು ನಮ್ಮ ಹಳ್ಳಿಗಾಡಿನ ಬಡಮಕ್ಕಳು. ಹೀಗಾಗಿ ಈ ದೋಷವನ್ನು ಈಗಲಾದರೂ ಸರಿಪಡಿಸಲು ಪೂರ್ವಪ್ರಾಥಮಿಕ ಹಂತದ ಇಡೀ ಮಕ್ಕಳ ಈ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಯವ
ರಿಂದ ಬಿಡಿಸಿ ಸರ್ಕಾರ ತಾನೇ ಸಂಪೂರ್ಣವಾಗಿ ವಹಿಸಿಕೊಂಡು ಕಡ್ಡಾಯ, ಉಚಿತ ಮತ್ತು ಸಮಾನ ಶಿಕ್ಷಣವು ಪ್ರತಿ ಮಗುವಿಗೂ ಈ ಹಂತದಲ್ಲಾದರೂ ಖಾತರಿಯಾಗುವಂತೆ ಮಾಡಬೇಕು. ಭಾಷಾ ಮಾಧ್ಯಮವೂ ಈ ಹಂತದಲ್ಲೇ ಎಲ್ಲ ಮಗುವಿಗೂ ಸಮಾನವಾಗಿರುವಂತಹ ವ್ಯವಸ್ಥೆಯನ್ನು ರೂಪಿಸಬೇಕು.

ಮಿಕ್ಕೆಲ್ಲ ವಿಷಯಗಳು ಈ ಮಗುಕೇಂದ್ರಿತ ಶಿಕ್ಷಣದ ಆಚೆಯ ಪರಿಧಿಯಲ್ಲಿ ಬರುವುದರಿಂದ ಅದಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸಬೇಕೇ ಹೊರತು, ಈಗಾಗಲೇ ತಳಹಂತದ ಮೂಲ ಶಿಕ್ಷಣದಲ್ಲಿ ವ್ಯಾಪಕವಾಗಿ
ರುವ ಅಸಮಾನ ವ್ಯವಸ್ಥೆಯನ್ನು ಇನ್ನಷ್ಟು ಅಸಮಾನಗೊಳಿಸಿ, ಮಗುವಿನ ಶೈಕ್ಷಣಿಕ ಮೂಲಭೂತ ಹಕ್ಕಿಗೆ
ಘಾತ ಉಂಟು ಮಾಡಬಾರದು. ಈ ವಿಚಾರದ ಹಿಂದಿರುವ ಎಲ್ಲ ಸೂಕ್ಷ್ಮ ಆಯಾಮಗಳನ್ನೂ ಪ್ರಾಜ್ಞರು ಚಿಂತಿಸಿ, ಅಂಚಿಗೆ ಒತ್ತರಿಸಲ್ಪಟ್ಟ ಬಡಮಕ್ಕಳು ಇನ್ನಾದರೂ ಮುಖ್ಯವಾಹಿನಿಯ ಸಮಾನ ಶಿಕ್ಷಣದ ಹಕ್ಕನ್ನು ಪಡೆಯುವೆಡೆಗೇ ನಮ್ಮ ಗಮನ ಕೇಂದ್ರೀಕರಿಸಬೇಕು.

ರೂಪ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT