ಭಾನುವಾರ, ಸೆಪ್ಟೆಂಬರ್ 20, 2020
22 °C

ಮತದಾರನ ಕೈಗೆ ರಾಜಕಾರಿಣಿಗಳ ಮೂಗುದಾರ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರ ಮತಗಳ ಆಧಾರದಲ್ಲಿ ಅಧಿಕಾರ ಪಡೆದ ಜನಪ್ರತಿನಿಧಿಯೊಬ್ಬ, ಮತದಾರರ ಹಿತಾಸಕ್ತಿಗೆ ಧಕ್ಕೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಅದು ಅವನ ಜವಾಬ್ದಾರಿ. ಆದರೆ ಈಗ ಆಗುತ್ತಿರುವುದೇನು? ಮತದಾರನ ಹಿತಾಸಕ್ತಿ ಕಾಪಾಡುವುದಿರಲಿ, ಜನಪ್ರತಿನಿಧಿಗಳು ಅಧಿಕಾರ ಸಿಕ್ಕಿದೊಡನೆಯೇ ತಮ್ಮ ಮಾನ– ಮರ್ಯಾದೆಯನ್ನೂ ಲೆಕ್ಕಿಸದೆ ಸಂಪತ್ತು ಕೂಡಿಡಲು ಪ್ರಾರಂಭಿಸುತ್ತಾರೆ. ಪಕ್ಷಾಂತರ, ರಾಜೀನಾಮೆ, ವಿಪ್ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ... ಇವೆಲ್ಲವೂ ಭ್ರಷ್ಟಾಚಾರದ ಬೇರೆ ಬೇರೆ ಮುಖಗಳೇ ಆಗಿವೆ.

ಮತ ನೀಡಿದ ನಂತರ ಮತದಾರ ಅಸಹಾಯಕ. ಜನಪ್ರತಿನಿಧಿಯು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದರೂ ಆತ ಏನೂ ಮಾಡಲಾಗುವುದಿಲ್ಲ. ಮುಂದಿನ ಚುನಾವಣೆಯವರೆಗೆ ಕಾಯಲೇಬೇಕಾದುದು ಅನಿವಾರ್ಯ. ಆದರೆ ಅಷ್ಟರಲ್ಲೇ ಆತನ ಕೋಪ, ತಾಪಗಳು ತಣ್ಣಗಾಗಿ, ಚುನಾವಣೆಯಲ್ಲಿ ಯಾರಿಗೋ ಒಬ್ಬರಿಗೆ ಮತ ಹಾಕಿ ಬರುತ್ತಾನೆ. ಜನಪ್ರತಿನಿಧಿಯು ವಾಮಮಾರ್ಗವನ್ನು ಅನುಸರಿಸಲು ಇದು ಕಾರಣವಾಗುತ್ತದೆ. ಜನರ ಈ ಅಸಹಾಯಕತೆಯನ್ನು ದೂರ ಮಾಡಲು, ಶಾಸಕತ್ವವನ್ನು ರದ್ದು ಮಾಡುವುದಕ್ಕೆ ಸಾಧ್ಯವಾಗುವಂತಹ ಅವಕಾಶವನ್ನು ಅವರಿಗೆ ನೀಡುವುದು ಸೂಕ್ತ. ಇಂಥ ಹಕ್ಕು ಮತದಾರನಿಗೆ ಸಿಕ್ಕಿದರೆ ಮಾತ್ರ ಪ್ರಜಾಪ್ರತಿನಿಧಿಯ ಮೂಗುದಾರ ಮತದಾರನ ಕೈಗೆ ಬರುತ್ತದೆ.

-ಗಣಪತಿ ಎಂ.ನಾಯ್ಕ, ಕಾನಗೋಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು