ಶನಿವಾರ, ಮೇ 21, 2022
20 °C

ವಾಚಕರ ವಾಣಿ| ಹಸಿರು ತೆರಿಗೆಯ ಕ್ರಮ‌ ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

15 ವರ್ಷಕ್ಕೂ ಹೆಚ್ಚು ಹಳೆಯದಾದ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯಲು ಹೆಚ್ಚು ತೆರಿಗೆ ವಿಧಿಸುವ ಕ್ರಮ ಅವೈಜ್ಞಾನಿಕವಾದುದು. ಹಳೆಯ ವಾಹನಗಳ‌ ಓಡಾಟ ಕಡಿಮೆಯಾದರೆ ವಾಯುಮಾಲಿನ್ಯ ತಗ್ಗುತ್ತದೆ ಎಂಬುದನ್ನು ಒಪ್ಪಬಹುದು. ಆದರೆ ಅದೇ ಹಳೆಯ ವಾಹನಗಳಿಗೆ ಹೆಚ್ಚು ದಂಡ ವಿಧಿಸಿ ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿದರೆ ಅವು ಕಡಿಮೆ ಹೊಗೆಯನ್ನೇನೂ ಉಗುಳುವುದಿಲ್ಲ. ಹಸಿರು ತೆರಿಗೆ ಹೆಚ್ಚಿಸುವುದರಿಂದ ಖಜಾನೆ ತುಂಬಿಸಬಹುದೇ ವಿನಾ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲಾಗದು.‌ ಅದರ ಬದಲು ಹಳೆಯ ವಾಹನಗಳಿಗೆ ಹೊಸ ತಂತ್ರಜ್ಞಾನ ಅಳವಡಿಸಿ, ನವೀನ ಮಾದರಿಯ ಉಪಕರಣ ಜೋಡಿಸುವುದನ್ನು ಕಡ್ಡಾಯ ಮಾಡಿದರೆ ವಾಯುಮಾಲಿನ್ಯ ತಗ್ಗಿಸಬಹುದು.

- ಗಣಪತಿ ನಾಯ್ಕ್, ಕಾನಗೋಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು