ಸೋಮವಾರ, ಮೇ 10, 2021
19 °C

ವಾಚಕರ ವಾಣಿ: ನಿರ್ಗತಿಕರ ಯೋಚನೆ ಬರಲಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಿಕ್ಷಾಟನೆ ಮಾಡುವ ಮಕ್ಕಳು ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗೆಟ್ಟು, ಜನರು ಕುಡಿದು ಬಿಸಾಡಿದ್ದ ಎಳನೀರಿನ ಕಾಯಿಗಳನ್ನು ಆಯ್ದು ತಿನ್ನುತ್ತಿದ್ದ ಅಮಾನವೀಯ ಸುದ್ದಿಯನ್ನು (ಪ್ರ.ವಾ., ಏ. 30) ಓದಿ ಮನಸ್ಸಿಗೆ ತುಂಬಾ ನೋವಾಯಿತು. ಕೊರೊನಾ ಸೋಂಕನ್ನು ತಡೆಯಲು ಸರ್ಕಾರ 14 ದಿನಗಳ ಲಾಕ್‌ಡೌನ್‌ ಜಾರಿ ಮಾಡಿದೆ. ಈ ಸಮಯದಲ್ಲಿ ಏನು ತೆರೆದಿರುತ್ತದೆ ಏನು ತೆರೆದಿರುವುದಿಲ್ಲ ಎಂಬುದನ್ನು ಸವಿಸ್ತಾರವಾಗಿ ಒಳಗೊಂಡ ಮಾರ್ಗಸೂಚಿ ಸಿದ್ಧಪಡಿಸಿದ ಸರ್ಕಾರಕ್ಕೆ, ರಸ್ತೆ ಬದಿಯ ನಿರ್ಗತಿಕರ ಹಸಿವನ್ನು ನೀಗಿಸುವ ಕುರಿತು ಕಿಂಚಿತ್‌ ಯೋಚನೆಯೂ ಬಾರದಿದ್ದುದು ನೋವಿನ ಸಂಗತಿ.

ಕೋವಿಡ್ ಸೋಂಕಿಗಿಂತ ಹಸಿವಿನಿಂದ ಸಾಯುವುದು ಘೋರವಾದುದು. ಎಲ್ಲರಂತೆ 14 ದಿನಗಳಿಗಾಗುವಷ್ಟು ಆಹಾರ ಅಥವಾ ಹಣವನ್ನು ಸಂಗ್ರಹಿಸುವ ಸಾಮರ್ಥ್ಯ ನಿರ್ಗತಿಕರಲ್ಲಿ ಇರುವುದಿಲ್ಲ. ಅವರು ಹೊಟ್ಟೆ ತುಂಬಿಸಿಕೊಳ್ಳಲು ದಿನವೂ ಹೆಣಗಾಡಬೇಕಾಗಿರುತ್ತದೆ. ಇಂತಹವರ ಹೊಟ್ಟೆ ಮೇಲೆ ಬರೆ ಎಳೆಯದೆ ಸರ್ಕಾರ ಕೂಡಲೇ ನಿರ್ಗತಿಕ ಕೇಂದ್ರಗಳನ್ನು ತೆರೆದು, ಅವರ ಹಸಿವನ್ನು ನೀಗಿಸಲಿ.

ಶ್ರೀಧರ ಎಸ್. ವಾಣಿ, ಕೊಪ್ಪಳ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು