ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಇ.ಡಿ ಇರುವುದೇ ಬೇಡವಾದವರ ‘ಹಿಡಿ’ಯಲು?

Last Updated 15 ನವೆಂಬರ್ 2022, 17:36 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಶಿವಸೇನಾ (ಉದ್ಧವ್‌ ಠಾಕ್ರೆ) ನಾಯಕ ಸಂಜಯ್‌ ರಾವುತ್ ಅವರ ಬಂಧನಕ್ಕೆ ವಿಶೇಷ ಕಾರಣಗಳೇ ಇಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಿದೆ.

ವಿರೋಧ ಪಕ್ಷಗಳು ಆಪಾದಿಸುತ್ತಿರುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಇರುವುದೇ ಬೇಡವಾದವರನ್ನು ಬಂಧಿಸಲು ಎಂಬಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆದಾಯ ತೆರಿಗೆ, ತನಿಖಾ ಸಂಸ್ಥೆಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ವಿರೋಧಿಗಳ ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿದೆ ಎನ್ನುವ ಬಲವಾದ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡುತ್ತಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕಾಲೆಳೆಯುವ, ಟೀಕಿಸುವ, ವಿರೋಧಿಸುವ ಪ್ರಕ್ರಿಯೆ ಅತಿ ಸಹಜ. ಹಾಗೆಂದು ಅಧಿಕಾರ ದುರ್ಬಳಕೆ ಅಸಮರ್ಥನೀಯ, ಅನಪೇಕ್ಷಣೀಯ.
–ಚನ್ನು ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT