ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ದುಬಾರಿ ಬದುಕು ನಿಯಂತ್ರಿಸಿ

Last Updated 9 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಆಟೊ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಜೊತೆಗೇ ಹೋಟೆಲಿನಲ್ಲಿ ಕಾಫಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚು ಮಾಡಲು ಹೋಟೆಲುಗಳ ಸಂಘ ಸಲಹೆ ನೀಡಿದೆ.

ಹೌದು, ಸಂಚಾರ ಮತ್ತು ಆಹಾರ ಎರಡೂ ದುಬಾರಿಯಾಗಿದ್ದು, ಜನರ ಜೀವನ ಜರ್ಜರಿತಗೊಂಡಿರುವುದು
ನಿಜ. ಇವಿಷ್ಟೇ ಅಲ್ಲದೆ ಎಲ್ಲ ಪದಾರ್ಥಗಳೂ ವಿಪರೀತ ಎಂಬಂತೆ ಬೆಲೆ ಏರಿಕೆ ಕಂಡಿವೆ. ಇದಕ್ಕೆ ಇಂಧನದ ಬೆಲೆ ಏರಿಕೆಯೇ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮೂಲ ಕಾರಣವಾದ ಇಂಧನದ ಬೆಲೆ ಈ ಮೊದಲಿನಂತೆಯೇ ಸರ್ಕಾರದ ಅಡಿಯಲ್ಲೇ ಇರುವಂತೆ, ಅಂದರೆ ಸಬ್ಸಿಡಿ ಕೊಡುವ ಮೂಲಕ ನಿಯಂತ್ರಿಸಿದರೆ ಇಂತಹ ಅಕಾಲಿಕ ಬೆಲೆ ಏರಿಕೆಯನ್ನು ತಡೆಗಟ್ಟಬಹುದಾಗಿದೆ. ಆರು ತಿಂಗಳಿಗೊಮ್ಮೆ ದರ ಪರಿಷ್ಕರಿಸಬಹುದು. ಕೇಂದ್ರ ಸರ್ಕಾರ ಈ ಕುರಿತು ಶೀಘ್ರವೇ ಚಿಂತಿಸಲಿ.

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT