ಶುಕ್ರವಾರ, ಡಿಸೆಂಬರ್ 2, 2022
19 °C

ವಾಚಕರ ವಾಣಿ | ಗುಜರಾತ್ ಅಭಿವೃದ್ಧಿ: ಅಪೂರ್ಣ ಸತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಮಂತ್ರಿ ಅವರು ಗುಜರಾತ್ ರಾಜ್ಯವು ಪ್ರಚಾರವಿಲ್ಲದೆ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ (ಪ್ರ.ವಾ., ಸೆ. 30). ಇದು ಪೂರ್ಣ ನಿಜವಲ್ಲ. ಗುಜರಾತಿನ ತಲಾ ವರಮಾನ 2019- 20ರಲ್ಲಿ ₹ 2,13,936ರಷ್ಟಿದ್ದರೆ ಕರ್ನಾಟಕದ್ದು ₹ 2,23,175. ಎನ್‍ಎಫ್‍ಎಚ್‍ಎಸ್– 5 ವರದಿ ಪ್ರಕಾರ, 2019-20ರಲ್ಲಿ ಗುಜರಾತಿನಲ್ಲಿ ಲಿಂಗ ಅನುಪಾತವು 965ರಷ್ಟಿದ್ದರೆ ಕರ್ನಾಟಕದಲ್ಲಿ 1,034. ಶಾಲಾ ಕಲಿಕೆಯನ್ನು 10 ವರ್ಷ ಮುಗಿಸಿದ ಮಹಿಳೆಯರ ಪ್ರಮಾಣ 2019-20ರಲ್ಲಿ ಗುಜರಾತಿನಲ್ಲಿ ಶೇ 45.6 ರಷ್ಟಿದ್ದರೆ, ಕರ್ನಾಟಕದಲ್ಲಿ ಇದು ಶೇ 56.5.

ಶಿಶುಮರಣ ಪ್ರಮಾಣ ಪ್ರತೀ ಸಾವಿರ ಜನನಗಳಿಗೆ ಗುಜರಾತಿನಲ್ಲಿ 31.2ರಷ್ಟಿದ್ದರೆ, ಕರ್ನಾಟಕದಲ್ಲಿ ಇದು 25.4. ಗುಜರಾತಿನಲ್ಲಿ 2019-20ರಲ್ಲಿ 6ರಿಂದ 59 ತಿಂಗಳ ಒಟ್ಟು ಮಕ್ಕಳಲ್ಲಿ ಅನೀಮಿಯ (ರಕ್ತಹೀನತೆ) ಎದುರಿಸುತ್ತಿರು ವವರ ಪ್ರಮಾಣ ಶೇ 79.7ರಷ್ಟಿದ್ದರೆ, ಕರ್ನಾಟಕದಲ್ಲಿ ಇದು ಶೇ 65.6ರಷ್ಟಿದೆ. ಹೀಗೆ ಯಾವುದೇ ಅಭಿವೃದ್ಧಿ ಸೂಚಿ ತೆಗೆದುಕೊಂಡರೂ ಗುಜರಾತ್ ರಾಜ್ಯದ ಅಭಿವೃದ್ಧಿಯು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಿಗಿಂತ ಕೆಳಮಟ್ಟ
ದಲ್ಲಿರುವುದು ಒಕ್ಕೂಟ ಸರ್ಕಾರದ ವರದಿಗಳಿಂದಲೇ ಸ್ಪಷ್ಟವಾಗುತ್ತದೆ.

⇒ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು