ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅರ್ಹತಾ ಪರೀಕ್ಷೆ: ಸ್ಥಳೀಯ ಭಾಷೆಗಿರಲಿ ಆದ್ಯತೆ

Last Updated 5 ಮೇ 2021, 19:30 IST
ಅಕ್ಷರ ಗಾತ್ರ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ರಾಜ್ಯದಲ್ಲಿನ ಸುಮಾರು 400 ಕ್ಲರ್ಕ್ (ಜೂನಿಯರ್ ಅಸೋಸಿಯೇಟ್‌) ಹುದ್ದೆಗಳಿಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಿದೆ. ಅರ್ಹತಾ ಪರೀಕ್ಷೆಯು ಬರೀ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ಹಂತಗಳಲ್ಲಿ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಅವರವರ ಮಾತೃಭಾಷೆಯಲ್ಲಿ ನಡೆದರೆ ಪ್ರಶ್ನೆಗಳು ಸ್ಪಷ್ಟವಾಗಿ ಅರ್ಥವಾಗಿ, ಅಭ್ಯರ್ಥಿಯು ಸಮರ್ಪಕವಾದ ಉತ್ತರವನ್ನು ಬರೆಯಲು ಸಾಧ್ಯವಾಗುತ್ತದೆ. ಪರೀಕ್ಷೆಯ ಅಧಿಸೂಚನೆಯಲ್ಲಿ ಒಂದೆಡೆ, ಸ್ಥಳೀಯ ಭಾಷೆಯ ಜ್ಞಾನ ಅತ್ಯವಶ್ಯಕ ಎಂಬ ಷರಾ ಹಾಕಿ, ಇನ್ನೊಂದೆಡೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆಯನ್ನೇ ನಡೆಸದಿರುವುದು ಅಕ್ಷಮ್ಯ.

ಕೋವಿಡ್‌ನ ಈ ಸಂಕಷ್ಟದ ಸ್ಥಿತಿಯಲ್ಲಿ ₹ 750 ಪರೀಕ್ಷಾ ಶುಲ್ಕ ದುಬಾರಿ ಎನಿಸಿದ್ದು ನಿರುದ್ಯೋಗಿಗಳು, ಉದ್ಯೋಗ ಆಕಾಂಕ್ಷಿಗಳಿಗೆ ಭರಿಸಲು ಕಷ್ಟವಾಗುತ್ತದೆ. ಹೀಗಾಗಿ ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದರ ಜೊತೆಗೆ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡುವುದು ಒಳ್ಳೆಯದು.

ಸರ್ದಾರ್ ಎಂ. ತನಾಝ್, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT