‘ಪ್ರಜಾವಾಣಿ’ಯ ‘ಫ್ಯಾಕ್ಟ್ ಚೆಕ್’ ಎಂಬ ನೂತನ ಅಂಕಣ ತುಂಬಾ ಪ್ರಸ್ತುತವಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬರುವ ಸುಳ್ಳುಸುದ್ದಿಗಳು ಮತ್ತು ವಾಸ್ತವದಲ್ಲಿ ಆ ಸುದ್ದಿಗಳ ಸತ್ಯಾಸತ್ಯತೆಯನ್ನು ಒಳಗೊಂಡ ಈ ಪರಾಮರ್ಶೆಯನ್ನು ಓದಿದರೆ ದಿಗ್ಭ್ರಮೆಯಾಗುತ್ತದೆ ಹಾಗೂ ಗಾಢ ವಿಷಾದ ಕವಿಯುತ್ತದೆ.

ಪ್ರಧಾನಿ ಇಡೀ ರಾಷ್ಟ್ರವನ್ನು ಉದ್ದೇಶಿಸಿ, ‘ಸುಳ್ಳು ಸುದ್ದಿಗಳನ್ನು ಹರಡಬೇಡಿ’ ಎಂದು ಭಾವಪೂರ್ಣವಾಗಿ ಕೋರುತ್ತಾರೆ; ಸುಳ್ಳು ಸುದ್ದಿ ಕುರಿತಂತೆ ಮಾಧ್ಯಮದವರನ್ನು ಹಾಗೂ ಓದುಗರನ್ನು ಮುಖ್ಯಮಂತ್ರಿ ಮತ್ತೆ ಮತ್ತೆ ಎಚ್ಚರಿಸಿದ್ದಾರೆ. ಆದರೂ ವಾಟ್ಸ್ಆ್ಯಪ್ ವಿ.ವಿ.ಯ ಪದವೀಧರರು, ಯಾರು ಏನೇ ಹೇಳಲಿ, ಕೊರೊನಾ ವೈರಸ್ ಇರಲಿ, ಎಚ್ಐವಿ ಇರಲಿ ಪ್ರತಿದಿನವೂ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಅವುಗಳನ್ನು ನೂರಾರು ಜನರಿಗೆ ತಲುಪಿಸಿ, ಅವು ವೈರಲ್ ಆಗುವಂತೆ ಕಾರ್ಯತತ್ಪರರಾಗಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಸುಳ್ಳು ಸುದ್ದಿ ಕುರಿತಂತೆ ಇತ್ತೀಚೆಗೆ ಹೊಸ ಕಾನೂನು ರಚಿಸಿದೆ. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದರೆ ಅದನ್ನು ‘ಸೈಬರ್ ಅಪರಾಧ’ ಎಂದು ಪರಿಗಣಿಸಿ, ಕೋಮು ಗಲಭೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕದಡಿದ ಅಪರಾಧದ ಅಡಿ ಎಲ್ಲಾ ಗುಂಪುಗಳ ಅಡ್ಮಿನ್‌ಗಳ ಮೇಲೆ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಲು ಅದು ಅವಕಾಶ ಕಲ್ಪಿಸುತ್ತದೆ. ಕರ್ನಾಟಕವೂ ಸೇರಿದಂತೆ ರಾಷ್ಟ್ರದ ಎಲ್ಲ ರಾಜ್ಯಗಳೂ ಮಹಾರಾಷ್ಟ್ರದ ಈ ಮಾದರಿಯನ್ನು ಅನುಸರಿಸಬೇಕು.

ಸಿ.ಎನ್.ರಾಮಚಂದ್ರನ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.