ಗುರುವಾರ , ನವೆಂಬರ್ 26, 2020
19 °C

ಶಾಶ್ವತ ಪರಿಹಾರ ರೂಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಬ್ಬಂದಿಗೆ ಸಂಬಳ ಕೊಡಲು ಖಾಸಗಿ ಶಾಲೆಗಳಿಗೆ ಸಾಧ್ಯವಾಗುವುದಿಲ್ಲ ಎಂದಾದರೆ, ಈ ಶಾಲೆಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದು, ಅನುದಾನಿತ ಶಾಲೆಗಳಾಗಿ ಪರಿವರ್ತಿಸುವುದು ಸೂಕ್ತ. ಇದರಿಂದ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಪ್ಪುತ್ತದೆ, ಇಂಗ್ಲಿಷ್, ಕನ್ನಡ ಎಂಬ ತಾರತಮ್ಯ ನಿಲ್ಲುತ್ತದೆ.

ಚೀನಾದಲ್ಲಿ ಇರುವಂತೆ 1ರಿಂದ 12ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೆ ನಮ್ಮ ದೇಶದಲ್ಲೂ ಏಕರೂಪದ ಶಿಕ್ಷಣ ಪಡೆಯಬಹುದು. ಪ್ರಸ್ತುತ ಖಾಸಗಿ ಶಾಲೆ ಶಿಕ್ಷಕರಿಗೆ ಸರ್ಕಾರಿ ಶಾಲೆಯ ಶಿಕ್ಷಕರು ಒಂದೆರಡು ದಿನದ ಸಂಬಳ ನೀಡುವುದರಿಂದ ಅವರ ಸಮಸ್ಯೆ ಬಗೆಹರಿಯುವುದಿಲ್ಲ. ಅದರ ಬದಲಾಗಿ, ಗಂಭೀರವಾಗಿ ಚಿಂತನೆ ನಡೆಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು.

- ಜಿ.ಪಳನಿಸ್ವಾಮಿ ಜಾಗೇರಿ, ಕೊಳ್ಳೇಗಾಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು