ಶನಿವಾರ, ಏಪ್ರಿಲ್ 4, 2020
19 °C

ಅಕ್ರಮ ಎಸಗುವವರಿಗೂ ಬೇಕು ರೇಡಿಯೊ ಕಾಲರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವ– ಪ್ರಾಣಿ ಸಂಘರ್ಷ ತಪ್ಪಿಸಲು 9 ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ‌ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ (ಪ್ರ.ವಾ., ಮಾರ್ಚ್‌ 13). ಆನೆಗಳು ನಾಡಿನ ಬಳಿ ಬರುತ್ತಿದ್ದಂತೆಯೇ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ಈ ಕಾಲರ್‌ಗಳು ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತವೆ. ಆದರೆ ಆನೆಗಳಿಗೆ ಕಾಲರ್ ತೊಡಿಸುವಂತೆಯೇ ಕಾಡಿನಲ್ಲಿ ಮರಗಳನ್ನು ಕಡಿಯುವ, ಗಣಿಗಾರಿಕೆ, ಮರಳು ಮಾಫಿಯಾ, ಕಳ್ಳಬೇಟೆ, ಒತ್ತುವರಿ ಮುಂತಾದ ಅಕ್ರಮಗಳನ್ನು ಎಸಗುತ್ತಿರುವವರಿಗೂ ಇಂತಹ ಕಾಲರ್‌ ತೊಡಿಸುವಂತಿದ್ದರೆ ಒಳ್ಳೆಯದಿತ್ತು.

ಕಾಡಿನ ಜೀವಿಯೊಂದು ನಾಡಿಗೆ ಬಂದರೆ ಮಾಹಿತಿ ನೀಡುವ ತಂತ್ರಜ್ಞಾನ ವಿದೆ. ಆದರೆ ನಾಡಿನ ಜೀವಿಯಾದ ಮಾನವ ಎಗ್ಗಿಲ್ಲದೇ ಅರಣ್ಯ ಸಂಪತ್ತನ್ನು ಲೂಟಿ ಮಾಡಿದರೆ ಯಾವ ಕಾಲರ್ ಕೂಡ ಮಾಹಿತಿ ನೀಡುವುದಿಲ್ಲ. ಈಗ ನಿಜಕ್ಕೂ ಅನಿಸುವುದೆಂದರೆ, ಇಲ್ಲಿ ಕಾಲರ್ ತೊಡಿಸಿಕೊಳ್ಳುವಂತಹ ಅಪರಾಧ ಮಾಡಿರುವುದು ವನ್ಯಜೀವಿಗಳಲ್ಲ, ಬದಲಿಗೆ ಮಾನವ.

–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)