ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮಂಡ್ಯ ಬೆಲ್ಲದ ಮಹತ್ವ ಉಳಿಸಿ

Last Updated 16 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಅದರದೇ ಆದ ಮಹತ್ವವಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರೈತರು ಇರುವುದರಿಂದ ಸುಮಾರು ಹತ್ತು ವರ್ಷಗಳ ಹಿಂದೆ ಪ್ರತೀ ಹಳ್ಳಿಯಲ್ಲೂ ಆಲೆಮನೆ ಅಥವಾ ಗಾಣಗಳಲ್ಲಿ ರೈತರು ಉತ್ತಮ ಗುಣಮಟ್ಟದ ಬೆಲ್ಲವನ್ನು ಉತ್ಪಾದಿಸುತ್ತಿದ್ದರು. ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ತುಂಬಾ ಬೇಡಿಕೆಯಿತ್ತು. ಗುಜರಾತ್, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಗೆ ಜಿಲ್ಲೆಯಿಂದ ಬೆಲ್ಲ ಹೋಗುತ್ತಿತ್ತು.

ಗ್ರಾಮೀಣ ಪ್ರದೇಶದಲ್ಲಿನ ಗಾಣ ಅಥವಾ ಆಲೆಮನೆ ಮಾಲೀಕರು ಕಬ್ಬಿನ ಗಾಣ ನಿರ್ವಹಣೆಯ ಕಷ್ಟ ಹಾಗೂ ಕೆಲಸಗಾರರ ಕೊರತೆಯ ನೆಲೆಯಲ್ಲಿ ದಿನೇದಿನೇ ಅದನ್ನು ಹೊರರಾಜ್ಯದ ಉದ್ಯಮಿಗಳಿಗೆ ಅಥವಾ ಕೆಲಸ ಮಾಡುವ ಕಾರ್ಮಿಕರಿಗೆ ಬಾಡಿಗೆಗೆ ಕೊಡುತ್ತಾ ಬಂದಿದ್ದಾರೆ. ಹೀಗೆ ಗಾಣವನ್ನು ಬಾಡಿಗೆಗೆ ಪಡೆದವರಲ್ಲಿ ಕೆಲವರು ಹಣದ ಆಸೆಯಿಂದ ರಾಸಾಯನಿಕ ಮಿಶ್ರಿತ ಬೆಲ್ಲವನ್ನು ತಯಾರಿಸಿ ಮಾರುಕಟ್ಟೆಗೆ ಕಳಿಸುವ ಕೆಲಸ ಮಾಡುತ್ತಾರೆ. ಇದು ಮಂಡ್ಯ ಬೆಲ್ಲದ ಹೆಸರು ಹಾಳಾಗಲು ಪ್ರಮುಖ ಕಾರಣವಾಗಿದ್ದು, ಮಂಡ್ಯ ಬೆಲ್ಲಕ್ಕೆ ಅಂತರರಾಜ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಗ್ಗಲು ಕಾರಣವಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಇರುವ ಅದರದೇ ಆದ ಬೆಲೆ ಮತ್ತು ಗೌರವವನ್ನು ಉಳಿಸಬೇಕು. ಕಳಪೆ ಬೆಲ್ಲ ತಯಾರಕರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

-ಶ್ರೀನಿವಾಸ್ ಚಕ್ರವರ್ತಿ, ಹೊಳಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT