ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರಿಗಳಿಗಷ್ಟೇ ಸೀಮಿತವಲ್ಲ ಮಥುರಾ

Last Updated 7 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಥುರಾವನ್ನು ಬರೀ ಭಕ್ತ ಯಾತ್ರಿಗಳಿಗೆ ಸೀಮಿತವಾದ ನಗರವೆಂದು ಗಣಪತಿ ಶಿರಳಗಿ ಅವರು (ವಾ.ವಾ.,
ಸೆ. 6) ಭಾವಿಸಿದಂತಿದೆ. ಆದರೆ ಮಥುರೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಮಾಂಸಾಹಾರಿಗಳು. ಹಾಗೆಯೇ ಇನ್ನು ಕೆಲವರು ಮಾಂಸ, ಮದ್ಯ ಹಾಗೂ ಇವಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿರತರಾಗಿರುವವರು. ಇವರ ಆಹಾರ ಪದ್ಧತಿಯನ್ನು, ಉದ್ಯೋಗವನ್ನು ಬಲವಂತದಿಂದ ಬದಲಾಯಿಸುವುದು ಫ್ಯಾಸಿಸ್ಟ್ ಧೋರಣೆಯಲ್ಲದೆ ಮತ್ತಿನ್ನೇನು? ಮಥುರಾ ಪ್ರವಾಸ ಕೈಗೊಳ್ಳುವ ಭಕ್ತರು ಕೆಲವು ದಿನ ಮಾತ್ರ ಮದ್ಯ, ಮಾಂಸಗಳಿಂದ ದೂರವುಳಿದು, ಪ್ರವಾಸದ ಬಳಿಕ ಗಣಪತಿ ಅವರು ಕರೆದಿರುವಂತೆ ಈ ‘ದುಶ್ಚಟ’ಗಳನ್ನು ಪುನರಾರಂಭಿಸಬಹುದು. ಆದರೆ ಇವರಿಗೆ ಕಿರಿಕಿರಿಯಾಗದಿರಲೆಂದು ಹಲವು ಮಥುರಾ ನಿವಾಸಿಗಳ ಆಹಾರ ಪದ್ಧತಿಯನ್ನೇ ಜೀವನಪರ್ಯಂತ ಬದಲಿಸುವ ಸರ್ಕಾರದ ನಿರ್ಧಾರ ವಿಚಿತ್ರ ಜಗತ್ತಿನಲ್ಲಿ ಮಾತ್ರ ಸರಿಯೆನಿಸಲು ಸಾಧ್ಯ.

- ಸುನೀಲ ನಾಯಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT