ವೈದ್ಯ ಪ್ರಪಂಚದ ಅಳುಕು– ಹುಳುಕು

7

ವೈದ್ಯ ಪ್ರಪಂಚದ ಅಳುಕು– ಹುಳುಕು

Published:
Updated:

ವಿಜ್ಞಾನ ವಿಶೇಷ ಅಂಕಣದಲ್ಲಿ (ಪ್ರ.ವಾ., ನ. 29) ನಾಗೇಶ ಹೆಗಡೆ ಅವರು ‘ವೈದ್ಯರಂಗದ ನೈತಿಕತೆಯನ್ನು ಪ್ರಶ್ನಿಸುವಾಗ ನಮ್ಮದನ್ನೂ ನಾವು ‍ಪ್ರಶ್ನಿಸಬೇಕಲ್ಲ!’ ಎಂದು ಅರ್ಥವತ್ತಾಗಿ ಕೇಳಿದ್ದಾರೆ. ಹೌದು, ನಮ್ಮ ಸುತ್ತಲೂ ಪರಿಸರ ಪರಿಶುದ್ಧವಾಗಿಲ್ಲ. ಬರೀ ವೈದ್ಯರ ಮೇಲೆ ಅಪವಾದ ಹೊರಿಸಿದರೆ ಹೇಗೆ? ವೈದ್ಯಕೀಯ ಪ್ರಪಂಚದಲ್ಲಿ ನಮ್ಮ ರಾಜಕೀಯ ರಂಗದ ಕೂಳುಬಾಕರ ಅಕ್ರಮ ಪ್ರವೇಶ ಸಲ್ಲ

ಅಧಿಕಾರಕ್ಕಾಗಿ ಈ ಕಳ್ಳರಾಜಕಾರಣಿಗಳು ವೈದ್ಯಕೀಯ ರಂಗದ ನೈತಿಕತೆಯನ್ನೇ ಅಲ್ಲಾಡಿಸುತ್ತಾರೆ. ‘ಮೂವತ್ತು ರೂಪಾಯಿ ಮೌಲ್ಯದ ಔಷಧವನ್ನು ಮೂವತ್ತು ಸಾವಿರ ರೂಪಾಯಿಗೆ ಮಾರುವ ಕಂಪನಿ ಷೇರು ಖರೀದಿಸಲು ನಮ್ಮ ಜನ ಮುಗಿ ಬೀಳುತ್ತಾರೆ’. ಇಂಥ ಖದೀಮರಿಂದಲೇ ಬಡ ರೋಗಿಗಳು ತತ್ತರಿಸಿ ಹೋಗಿದ್ದಾರೆ, ಅನೇಕ ಖಾಸಗಿ ನರ್ಸಿಂಗ್ ಹೋಂಗಳು ಮಿರಿ ಮಿರಿ ಮಿಂಚುತ್ತಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !