ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪರಿಸರ ಸ್ನೇಹಿ ಆಗಬೇಕಿದೆ ಮುಟ್ಟು

Last Updated 25 ಆಗಸ್ಟ್ 2020, 16:21 IST
ಅಕ್ಷರ ಗಾತ್ರ

ಮುಟ್ಟಿನ ವಿಷಯದ ಬಗ್ಗೆ ಪ್ರಕಟವಾದ ಲೇಖನ (ಪ್ರ.ವಾ., ಆ. 25) ಮನಮುಟ್ಟುವಂತಿತ್ತು. ಮುಟ್ಟು ಹೇಗೆ ಹೆಣ್ಣು ಮಕ್ಕಳು ನಿಸ್ಸಂಕೋಚವಾಗಿ ಮಾತನಾಡುವ ವಿಷಯವಾಗಬೇಕೋ ಅದೇ ರೀತಿ ಮುಟ್ಟು ‘ಪರಿಸರಸ್ನೇಹಿ’ಯೂ ಆಗಬೇಕು. ನಾವು ಬಳಸಿ ಬಿಸಾಡಿದ ನ್ಯಾಪ್ಕಿನ್ 500 ವರ್ಷಗಳಾದರೂ ಕೊಳೆಯದೆ ಭೂಮಿಯಲ್ಲಿ ತ್ಯಾಜ್ಯವಾಗಿ ಉಳಿಯುತ್ತದೆ ಎಂಬುದರ ಅರಿವು ಎಲ್ಲರಲ್ಲೂ ಮೂಡಬೇಕು. ಪರಿಸರಸ್ನೇಹಿ ನ್ಯಾಪ್ಕಿನ್‌ಗಳು ಎಲ್ಲಾ ಹೆಣ್ಣು ಮಕ್ಕಳಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಬೇಕು. ‘ಮೆನ್‌ಸ್ಟ್ರುಯಲ್‌ ಕಪ್’ಗಳ ಬಳಕೆಯ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಇಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶಾಲೆಗಳಲ್ಲಿಯೇ ಪ್ರಾರಂಭವಾಗಬೇಕು.

-ಶಾಲಿನಿ ಮನೋಹರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT