ಮಂಗಳವಾರ, ಅಕ್ಟೋಬರ್ 22, 2019
23 °C

ಮಹಿಷ ದಸರಾಕ್ಕೆ ತಡೆ: ರಾಜಕೀಯ ಕುಲಕ್ಕೆ ಕಳಂಕ ತರುವ ನಡೆ

Published:
Updated:

ಮೈಸೂರಿನಲ್ಲಿ ಎಂದಿನಂತೆ ಆಚರಿಸಲು ಉದ್ದೇಶಿಸಿದ್ದ ಮಹಿಷ ದಸರಾವನ್ನು ಸಂಸದ ಪ್ರತಾಪ್ ಸಿಂಹ ಅವರು ತಡೆದದ್ದು ಸರಿಯಲ್ಲ. ವೇದಿಕೆ ತೆರವುಗೊಳಿಸುವಂತೆ ಸಾರ್ವಜನಿಕರ ಸಮ್ಮುಖದಲ್ಲೇ ಅವರು ಪೊಲೀಸ್‌ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ಯಾರೇ ಆಗಿರಲಿ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಗೌರವ ಕೊಡುವುದು ಮನುಷ್ಯ ಧರ್ಮ. ಈ ರೀತಿಯ ಗೂಂಡಾ ವರ್ತನೆಯು ರಾಜಕೀಯ ಕುಲಕ್ಕೆ ಕಳಂಕ ತರುತ್ತದೆ. ಸಂಸದರು ಪೊಲೀಸ್‌ ಅಧಿಕಾರಿಗಳ ಕ್ಷಮೆ ಕೇಳಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು.

–ಆಕಾಶ್ ಆರ್‌.ಎಸ್‌., ಶಿವಮೊಗ್ಗ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)