ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಕ್ಕಳಿಗೆ ಹೊಸ ದಿಕ್ಕು ತೋರಬೇಕಿದೆ

Last Updated 13 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾಷಾ ಮಾಧ್ಯಮದ ಬಗ್ಗೆ ಜಿ.ಎಸ್.ಜಯದೇವ ಅವರ ಅಭಿಪ್ರಾಯಗಳು (ಪ್ರ.ವಾ., ಆ. 12) ಸಮಂಜಸವಾಗಿವೆ. ಮಕ್ಕಳ ಒಡನಾಟ, ಶಿಕ್ಷಣ, ಅವರ ಮನೋಧರ್ಮಗಳ ಸ್ವಯಂ ಅನುಭವದ ಮಾತುಗಳಿವು. ಮಾತೃಭಾಷೆ ಇಲ್ಲವೇ ಪರಿಸರದ ಭಾಷೆಯಲ್ಲೇ ಶಿಕ್ಷಣ ದೊರಕಬೇಕು. ಎಲ್ಲಾ ಹಂತದಲ್ಲಿ ಮಾತೃಭಾಷೆಯ ಒಂದು ವಿಷಯ ಇರಬೇಕು. ಯಾವ ರಾಜ್ಯದಲ್ಲೇ ಆಗಲಿ ಈ ನಿಯಮ ಇರಬೇಕು.

ಪದವಿಪೂರ್ವ ಹಾಗೂ ಪದವಿ ಹಂತಗಳಲ್ಲಿ ಉತ್ತಮ ಸಾಹಿತ್ಯ ಕೃತಿಗಳ ಅಧ್ಯಯನ ಮಾಡುವಂತೆ ಇರಬೇಕು. ಯಾಂತ್ರಿಕ ಶಿಕ್ಷಣದಿಂದ ಮಕ್ಕಳನ್ನು ಹೊರತಂದು, ಭಾರತೀಯ ಜ್ಞಾನ ಪರಂಪರೆಯ ಪರಿಕಲ್ಪನೆಯಲ್ಲಿ ಅವರನ್ನು ಅರಳಿಸಬೇಕು. ಶಿಕ್ಷಣ ಒಂದು ದಂಧೆಯಾಗಿರುವುದನ್ನು ನಿಲ್ಲಿಸಿ, ನಮ್ಮ ಮಕ್ಕಳಿಗೆ ಹೊಸ ದಿಕ್ಕನ್ನು ತೋರಿಸಬೇಕು.

-ಜಿ.ಎನ್.ಪ್ರತಿಭಾ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT