ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಗ್ರೀನ್‌ ಹೈವೆ: ಮರೆತ ಆಶ್ವಾಸನೆ

Last Updated 9 ಜೂನ್ 2022, 19:31 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿ 167, ಭಾರತದಲ್ಲಿ ಮಹತ್ವದ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಸುಮಾರು 485 ಕಿಲೊಮೀಟರ್‌ನಷ್ಟು ವಿಸ್ತಾರ ಹೊಂದಿದ್ದು, ಇದು ಹಾದು ಹೋಗುವ ಪ್ರದೇಶವು ಬರೀ ಬರಡು ಭೂಮಿಯಿಂದ ಕೂಡಿದೆ. ಆದ್ದರಿಂದ ಈ ಹೆದ್ದಾರಿಯನ್ನು ಗ್ರೀನ್ ಹೈವೆಯಾಗಿ ಪರಿವರ್ತಿಸಿದಲ್ಲಿ ವಾತಾವರಣದಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಆಗುತ್ತದೆ ಎಂಬ ಕಾರಣಕ್ಕೆ ಗ್ರೀನ್ ಹೈವೆ ನೀತಿಯಡಿ ಇದನ್ನು ಮೇಲ್ದರ್ಜೆಗೆ ಏರಿಸುವುದಾಗಿ ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ಈ ಕಾರ್ಯವನ್ನು ಒಂದೇ ವರ್ಷದಲ್ಲಿ ಕೈಗೊಳ್ಳುವುದಾಗಿ ಮೂರು ವರ್ಷಗಳ ಹಿಂದೆ ಅವರು ನೀಡಿದ್ದ ಆಶ್ವಾಸನೆ ಈವರೆಗೂ ಈಡೇರಿಲ್ಲ. ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಲ್ಲಿ ಮಾತ್ರ ಪರಿಸರ ದಿನಾಚರಣೆ, ವನಮಹೋತ್ಸವದಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ.

–ವಿಜಯಕುಮಾರ್ ಎಚ್.ಕೆ., ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT