ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಮೌಲ್ಯಮಾಪನ: ಬೇಕು ತರಬೇತಿ

Last Updated 6 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಗೌರಿ-ಗಣೇಶ ಹಬ್ಬದ ಆಚರಣೆಗೆ ಕೋವಿಡ್ ನಿಯಮ ಪಾಲನೆ ಹಾಗೂ ಷರತ್ತುಬದ್ಧ ಅನುಮತಿ ನೀಡಲು ಸರ್ಕಾರ ತೀರ್ಮಾನಿಸಿರುವುದು (ಪ್ರ.ವಾ., ಸೆ. 6) ಒಳ್ಳೆಯದು. ಆದರೆ, ಕೋವಿಡ್ ಸುರಕ್ಷತೆಯಷ್ಟೇ ವಿದ್ಯುತ್, ನೀರಿನಂಥ ಅನ್ಯ ಕಾರಣಗಳಿಂದ ಅವಘಡಗಳು ಸಂಭವಿಸುವ ಅನೇಕ ಉದಾಹರಣೆಗಳಿದ್ದು, ಅವುಗಳನ್ನು ಕೂಡ ತಪ್ಪಿಸುವ ಸಲುವಾಗಿ ಆಲೋಚಿಸುವುದು ಮುಖ್ಯವಾದ ಅಂಶ.

ಸಂಘಟಕರು ಹಬ್ಬದ ಆಚರಣೆಯ ಸಂಪೂರ್ಣ ಚಟುವಟಿಕೆಗಳನ್ನು ಪಟ್ಟಿ ಮಾಡಿ, ಅವುಗಳಿಂದ ಆಗಬಹುದಾದ ಅಪಾಯದ ಮೌಲ್ಯಮಾಪನ ಮಾಡುವುದರಿಂದ, ಸ್ವಲ್ಪದರಲ್ಲಿಯೇ ತಪ್ಪಿ ಹೋಗುವ ಸಾಧ್ಯತೆಗಳಿರುವಂಥ ಘಟನೆಗಳನ್ನು ಗುರುತಿಸಬಹುದು. ಇದರಿಂದ, ಅಪಘಾತಗಳನ್ನು ತಪ್ಪಿಸಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತವೆ. ಈ ದಿಸೆಯಲ್ಲಿ ಸರ್ಕಾರವು ಸಂಘಟಕರಿಗೆ ‘ಅಪಾಯದ ಮೌಲ್ಯಮಾಪನ ಕೌಶಲ’ಗಳ ಬಗ್ಗೆ ತರಬೇತಿ ಏರ್ಪಡಿಸುವ ಬಗ್ಗೆಯೂ ಚಿಂತನೆ ನಡೆಸಬೇಕು.

- ಡಾ. ಜಿ.ಬೈರೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT