ಗುರುವಾರ , ಆಗಸ್ಟ್ 11, 2022
24 °C

ಸಿನಿಮಾ ಗುಣಮಟ್ಟ: ಆತ್ಮಾವಲೋಕನ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಕಾರಣ ಏನಿರಬಹುದೆಂದು ಆಳವಾಗಿ ಚಿಂತಿಸಬೇಕಾಗುತ್ತದೆ. ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬುದೇನೋ ನಿಜ. ಆದರೆ ಬಂದ ಬೆರಳೆಣಿಕೆಯಷ್ಟು ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿರುವನೇ? ಅಂತಹ ಚಿತ್ರಗಳು ಕೇವಲ ಪ್ರಶಸ್ತಿಯನ್ನಷ್ಟೇ ಪಡೆದು ಸುಮ್ಮನಾದರೆ ಸಾಕೇ? ಆ ಸಿನಿಮಾಗೆ ಪ್ರೋತ್ಸಾಹ ಬೇಡವೇ? ಅದೇ ಚಿತ್ರತಂಡ ಇಂತಹುದೇ ಮತ್ತೊಂದು ಸದಭಿರುಚಿಯ ಚಿತ್ರ ಮಾಡಬೇಕೆಂದು ಯೋಚಿಸಲು ನೈತಿಕ ಧೈರ್ಯ ಬರುವಂತೆ ಮಾಡುವುದಕ್ಕಾದರೂ ಇಂತಹ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.

ಪ್ರಸ್ತುತ ಪ್ರೇಕ್ಷಕ ಇಷ್ಟಪಟ್ಟು ನೋಡುತ್ತಿರುವ ಸಿನಿಮಾಗಳಾದರೂ ಎಂಥವು? ಅಗಣಿತ ಕ್ರೌರ್ಯ, ಹಿಂಸೆ, ಲೈಂಗಿಕ ಅಂಶ... ಇಂತಹ ವಸ್ತು ಹೊಂದಿರುವ ಸಿನಿಮಾಗಳೇ ಹೆಚ್ಚಾಗಿರುತ್ತವೆ. ಸಮಾಜದಲ್ಲಿ ನಡೆಯುತ್ತಿರುವುದನ್ನೇ
ತೋರುತ್ತಿದ್ದೇವೆ ಎನ್ನುವ ಸಿನಿಮಾ, ಸಿನಿಮಾದಲ್ಲಿ ಇರುವುದನ್ನೇ ಮಾಡುತ್ತಿದ್ದೇವೆ ಎನ್ನುವ ಸಮಾಜ, ಇಂತಹ ಸ್ಥಿತಿಯಲ್ಲಿ ಎರಡೂ ಕಡೆಯಿಂದ ಆತ್ಮಾವಲೋಕನ ಆಗಬೇಕಾಗಿದೆ.

ಮುಳ್ಳುಗಳ ನಡುವೆ ಅರಳಿ ಹೊಳೆಯುವ ಗುಲಾಬಿಯಂತೆ, ಸಮಾಜದಲ್ಲಿ ಕಾಣುವ ಒಳ್ಳೆಯದನ್ನು ಹೆಕ್ಕಿ ಮತ್ತೆ ಸಮಾಜಕ್ಕೆ ತೋರಿ, ಮತ್ತಷ್ಟು ಒಳ್ಳೆಯದನ್ನು ಮಾಡಿಸುವ ದಿಟ್ಟತನ ತೋರುವ ಜವಾಬ್ದಾರಿ ಸಿನಿಮಾದ ಮೇಲಿದ್ದರೆ, ಅಂತಹ ಸಿನಿಮಾಗಳನ್ನು ಹೆಚ್ಚು ನೋಡುವುದನ್ನು ರೂಢಿಸಿಕೊಳ್ಳಬೇಕಿರುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ.

-ಎಸ್.ಮಲ್ಲಿಕ್ ಭರತ್, ಸಾಸಲಾಪುರ, ಕನಕಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು