ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಅಧಿಕಾರಕ್ಕಾಗಿ ಅನಿವಾರ್ಯ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳುವವರು ಮಠಾಧೀಶರ ಕಾಲಿಗೆ ಬೀಳುವುದನ್ನು ಆಕ್ಷೇಪಿಸಿರುವ ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಆ. 31) ರಾಜ್ಯದ ರಾಜಕಾರಣ ಹೇಗಿದೆ ಎಂಬುದರ ದಿಕ್ಸೂಚಿ. ಇದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾತ್ರ ಅನ್ವಯಿಸುವಂಥದ್ದಲ್ಲ. ಅವರು ಹಾಗೆ ಮಠಾಧೀಶರ ಕಾಲಿಗೆ ಬೀಳದಿದ್ದರೆ ಮತದಾರ ಭಕ್ತರು ಉದ್ಧಟತನ ಎಂದು ಭಾವಿಸುವ ಸ್ಥಿತಿ ಇಂದು ಇದೆ. ಜನಸಾಮಾನ್ಯರ ತೆರಿಗೆ ಹಣವನ್ನು ಜಾತಿಕೇಂದ್ರಿತ ಮಠಗಳಿಗೆ ಹಂಚುವುದು ದುರದೃಷ್ಟಕರ. ಅಧಿಕಾರ ಉಳಿಸಿಕೊಳ್ಳಲು, ಸ್ವಾಮೀಜಿಗಳಿಗೆ ಕವರ್ ಹಂಚಿದ್ದನ್ನೂ ಕಂಡಿದ್ದೇವೆ. ಮಠಗಳ ಸ್ವಾಮೀಜಿಗಳು ಯಾವ ಜಾತಿಗೆ ಎಷ್ಟು ಮೀಸಲಾತಿ ಇರಬೇಕೆಂದು ನಿರ್ಧರಿಸುವ ಮಟ್ಟಿಗೆ ಈ ಸ್ಥಿತಿ ತಲುಪಿರುವುದು ದುರದೃಷ್ಟಕರ.

-ಅತ್ತಿಹಳ್ಳಿ ದೇವರಾಜ್, ಹಾಸನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು