ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಶಯೋಕ್ತಿ ಎನಿಸದ ನಡೆ!

Last Updated 10 ಡಿಸೆಂಬರ್ 2021, 19:42 IST
ಅಕ್ಷರ ಗಾತ್ರ

ಗುತ್ತಿಗೆದಾರರು ಶೇ 40ರಷ್ಟು ಕಮಿಷನ್ ನೀಡಬೇಕಾದ ಬಗ್ಗೆ ಪ್ರಧಾನಿಗೆ ಪತ್ರ ಬರೆದ ಸುದ್ದಿ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದವರು ಕಿಡಿಕಾರಲು ಉಪಯೋಗವಾಯಿತು. ಆದರೆ ಜನಸಾಮಾನ್ಯರಿಗೆ ಇದು ಅತಿಶಯೋಕ್ತಿ ಎನಿಸಲಿಲ್ಲ. ಇದು ಸಾರ್ವಜನಿಕ ಸತ್ಯ ಎಂದು ಜನರು ಸುಮ್ಮನಾದಂತಿದೆ. ಹೊರೆಯಾದ ಶುಲ್ಕವನ್ನು ಭರಿಸದೇ ಇದ್ದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಹಾಕಿದ್ದಕ್ಕೆ ಅವರ ತಂದೆಯು ಪ್ರಧಾನಿಗೆ ಪತ್ರ ಬರೆದು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಇದನ್ನೆಲ್ಲ ನೋಡಿದರೆ, ನಾವೆಲ್ಲ ಏಕಿದ್ದೇವೆ ಎಂದು ಜನಪ್ರತಿನಿಧಿಗಳೆಲ್ಲ ಪ್ರಶ್ನಿಸಿಕೊಳ್ಳುವ ಕಾಲ ಬಂದಂತಿದೆ. ಸಂವೇದನೆ ಉಳ್ಳವರು ಪ್ರಶ್ನಿಸಿಕೊಳ್ಳುವರೇ? ಇಲ್ಲ, ನಮಗೆ ಪತ್ರ ಬರಲಿಲ್ಲವಲ್ಲ, ನಾವು ಪ್ರಶ್ನಾತೀತರು ಅಲ್ಲವೇ ಎಂದು ಕೊಂಡು ಸುಮ್ಮನಾಗುವರೇ?

- ಮಲ್ಲಿಕಾರ್ಜುನ, ಸುರಧೇನುಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT