ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನದ ಬಗೆಗೆ ನಮ್ಮ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ನೆರೆಹೊರೆಯ ದೇಶಗಳ (ಅದರಲ್ಲೂ ಪಾಕಿಸ್ತಾನದ) ಸ್ಥಿತಿಗಿಂತ ತನ್ನ ದೇಶದ ಸ್ಥಿತಿ ಕೀಳಾಗಿಲ್ಲ ಎಂದೂ ವಾದಿಸಿದೆ. ನ್ಯೂನ ಪೋಷಿತರು ಶೇ 15.3ರಷ್ಟು ಇರುವುದು ವಾಸ್ತವದಿಂದ ದೂರವೇನಲ್ಲ.

ಐಎಂಎಫ್, ವಿಶ್ವಬ್ಯಾಂಕ್, ರೇಟಿಂಗ್ ಏಜೆನ್ಸಿಗಳು, ಅಮೆರಿಕ ಮೂಲದ ಕೆಲವು ಮಾಧ್ಯಮಗಳು ಕೊಡುವ ಅಂಕಿಅಂಶಗಳನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು, ದೇಶೀಯ ಸಂಸ್ಥೆಗಳು ಅನನುಕೂಲಕರ ಫಲಿತಾಂಶ ಸಿದ್ಧಪಡಿಸಿದಾಗ ಅದನ್ನು ತಡೆಹಿಡಿಯುವುದು, ಐಸಿಎಂಆರ್ ನಂತಹ ಸ್ವಯಮಾಧಿಕಾರದ ಸಂಸ್ಥೆಗಳು ತನ್ನ ಇಂಗಿತಾನುಸಾರ ಹೇಳಿಕೆಗಳನ್ನು ನೀಡುವಂತೆ ಮಾಡುವುದು- ಇದನ್ನೆಲ್ಲ ನೋಡಿದ್ದೇವೆ. ಕೊರೊನಾ ಕಾಲದಲ್ಲಿ ಉಚಿತ ಧಾನ್ಯ ನೀಡಿರುವುದು ನಿಜ. ಆದರೆ ಅದರಿಂದ ಸಿಕ್ಕ ಭದ್ರತೆ ತಾತ್ಕಾಲಿಕ. ಭಾರತದ ಬಡತನ, ಹಸಿವುಗಳಿಗೂ ಸೊಮಾಲಿಯಾ, ಇಥಿಯೋಪಿಯದ ಸ್ಥಿತಿಗತಿಗಳಿಗೂ ವ್ಯತ್ಯಾಸ ಇದೆ. ಆಹಾರ ಧಾನ್ಯಗಳ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚು ಇರುವಾಗಲೂ ಕುಪೋಷಣೆ ಇದೆ. ಉತ್ತಮ ಗುಣಮಟ್ಟದ ಆಹಾರ ಪಡೆಯಲು ಉದ್ಯೋಗ, ಆದಾಯದ ಅವಕಾಶಗಳು ಇರಬೇಕಲ್ಲವೇ? 2020ರ ಮಾರ್ಚ್‌ನಿಂದೀಚೆಗೆ ಇದು ಹಲವರಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿರುವುದು ಸುಳ್ಳೇ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಸ್ತುತ ಸ್ಥಾನಮಾನದ ಬಗ್ಗೆ ಗಾಬರಿ ವ್ಯಕ್ತಪಡಿಸಿ, ವಿಧಾನ ವನ್ನು ಪ್ರಶ್ನಿಸುವುದರ ಬದಲಿಗೆ ನ್ಯೂನತೆ ಶೋಧಿಸಲಿ, ಸರಿಪಡಿಸಲು ಗಮನಹರಿಸಲಿ. ಅಂತೆಯೇ, ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡಬಲ್ಲ ಬೇರೆ ಇಲಾಖೆಗಳು ತಮ್ಮ ಕೆಲಸವನ್ನು ಇನ್ನಷ್ಟು ತೀವ್ರಗೊಳಿಸಲಿ. ಪರಿಣಾಮಕಾರಿಯಾಗಿ ಮಾಡಲಿ.

ಎಚ್.ಎಸ್.ಮಂಜುನಾಥ,ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.