ಶುಕ್ರವಾರ, ಏಪ್ರಿಲ್ 10, 2020
19 °C

ವಾಚಕರ ವಾಣಿ | ಒಬಿಸಿ ಪ್ರಮಾಣಪತ್ರ: ಮನವಿ ಪರಿಗಣಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತರೆ ಹಿಂದುಳಿದ ವರ್ಗದ (ಒಬಿಸಿ) ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣದ ಮೀಸಲಾತಿ ಸೌಲಭ್ಯ ಪಡೆಯಲು, ಒಬಿಸಿ ಪ್ರಮಾಣಪತ್ರಕ್ಕಾಗಿ ನೆಮ್ಮದಿ ಅಥವಾ ಅಟಲ್ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿದರೆ, ಅವರಿಗೆ ‘ಭಾರತ ಸರ್ಕಾರದ ಹುದ್ದೆಗೆ ಆಯ್ಕೆಗೊಳ್ಳಲು ಇತರೆ ಹಿಂದುಳಿದ ವರ್ಗದವರು ಸಲ್ಲಿಸಬೇಕಾದ ಪ್ರಮಾಣಪತ್ರದ ನಮೂನೆ’ ಎಂಬ ತಲೆಬರಹದ ಅಡಿ ಪ್ರಮಾಣಪತ್ರ ದೊರೆಯುತ್ತದೆ!

ಉದ್ಯೋಗದ ಬದಲು ಶಿಕ್ಷಣಕ್ಕಾಗಿ ಒಬಿಸಿ ಪ್ರಮಾಣಪತ್ರ ಕೊಡಿ ಎಂದು ತಹಶೀಲ್ದಾರರನ್ನು ಕೋರಿದರೆ, ನಿಗದಿತ ನಮೂನೆ ಬಿಟ್ಟು, ಶಿಕ್ಷಣಕ್ಕಾಗಿ ಒಬಿಸಿ ಪ್ರಮಾಣಪತ್ರ ನೀಡಲು ನಮಗೆ ಆದೇಶ ಇಲ್ಲ ಎನ್ನುತ್ತಿ
ದ್ದಾರೆ. ಹೋಗಲಿ, ಮೀಸಲಾತಿಗಾಗಿ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ದಿಷ್ಟಪಡಿಸಿದ ನಮೂನೆಯಲ್ಲಾ
ದರೂ ಒಬಿಸಿ ಪ್ರಮಾಣಪತ್ರ ಕೊಡಿ ಎಂದು ಕೋರಿದರೂ ಪ್ರಚಲಿತ ನಮೂನೆ ಬಿಟ್ಟು, ಬೇರೆ ಯಾವುದೇ ಹೊಸ ನಮೂನೆಯಲ್ಲಿ ಒಬಿಸಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗುತ್ತಿದೆ. ಇದ ರಿಂದ, ರಾಜ್ಯದ ಹೊರಗೆ, ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿಯು ಕರ್ನಾಟಕದ ಒಬಿಸಿ ವಿದ್ಯಾರ್ಥಿಗಳಿಗೆ ಎದುರಾಗಿದೆ. ಈ ನ್ಯೂನತೆಯನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು.

ಲೋಕೇಶ ಎಲ್. ಗೌಡ, ಗೋಕರ್ಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)