ಗುರುವಾರ , ಜೂನ್ 24, 2021
23 °C

ವಾಚಕರ ವಾಣಿ: ‘ಪುಸ್ತಕ ಬಾಗಿನ’ ಪರಿಭಾಷೆ ಗಟ್ಟಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುವೆ, ಹಬ್ಬದಂತಹ ಶುಭ ಸಮಾರಂಭಗಳಲ್ಲಿ ಹೂಗಿಡ, ತುಳಸಿ ಗಿಡಗಳನ್ನು ಕೊಡುವುದು ಜನರಿಗೆ ಇತ್ತೀಚೆಗೆ ರೂಢಿಯಾಗಿದೆ. ಹಾಗೇ ಪುಸ್ತಕಗಳನ್ನೂ ಕೊಡಬಹುದು. ಕೆಲವೆಡೆ ಈಗಾಗಲೇ ಇದನ್ನು ಅನುಸರಿಸುತ್ತಿದ್ದಾರೆ. ಇದೊಂದು ಒಳ್ಳೆಯ ಸಂಪ್ರದಾಯವೇ ಸರಿ. ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ, ನಾಡಿನ ಚರಿತ್ರೆಯನ್ನು ಹೇಳುವ, ಮನಸ್ಸಿಗೆ ಆಹ್ಲಾದ ತರುವ ಸದಭಿರುಚಿಯ ಪುಸ್ತಕಗಳನ್ನು ಉಡುಗೊರೆಗಾಗಿ ಆಯ್ದುಕೊಳ್ಳಬಹುದು.

ಆನ್‌ಲೈನ್‌ ಪುಸ್ತಕಗಳು ಬಂದು ನೈಜ ಓದಿನ ಅನುಭೂತಿಗೆ ಹಿನ್ನಡೆಯಾಗಿದೆ. ಪುಸ್ತಕ ಓದುವಿಕೆಯಲ್ಲಿ ತಂತ್ರಜ್ಞಾನವನ್ನು ಸ್ವೀಕರಿಸಬೇಕು, ನಿಜ. ಆದರೆ, ಅದರ ಜೊತೆಗೆ ಮುದ್ರಿತ ಪುಸ್ತಕಗಳನ್ನು ಓದುವ ಆನಂದವನ್ನೂ ಕಳೆದುಕೊಳ್ಳಬಾರದು. ಗೃಹ ಪ್ರವೇಶ, ನಾಮಕರಣ, ಮದುವೆ ಮೊದಲಾದ ಸಂಭ್ರಮದ ಕ್ಷಣಗಳಲ್ಲಿ ಪ್ಲಾಸ್ಟಿಕ್ ಡಬ್ಬಿ, ಸ್ಟೀಲ್ ಪಾತ್ರೆ, ಅಷ್ಟೇನೂ ಉಪಯೋಗಕ್ಕೆ ಬಾರದ ಬ್ಲೌಸ್ ಪೀಸ್ ಕೊಡುವ ಬದಲು ಅಥವಾ ಅವುಗಳ ಜೊತೆಗೇ ಪುಸ್ತಕವನ್ನೂ ಕೊಟ್ಟರೆ ಚೆನ್ನಾಗಿರುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯವರಿಗೆ ಓದಿನಲ್ಲಿ ಅಭಿರುಚಿ ಹುಟ್ಟಿಸಿದಂತಾಗುತ್ತದೆ.

ಪುಸ್ತಕ ಬಹುಮಾನ ಎಂಬ ಪದ ಚಾಲ್ತಿಯಲ್ಲಿರುವಂತೆ ಪುಸ್ತಕ ತಾಂಬೂಲ, ಪುಸ್ತಕ ಬಾಗಿನ ಎಂಬ ಪರಿಭಾಷೆಗಳು ಗಟ್ಟಿಯಾದರೆ, ದೇಶ ಸುತ್ತು ಕೋಶ ಓದು ಎಂಬ ಹಿರಿಯರ ಮಾತನ್ನು ಬೆಂಬಲಿಸಿದಂತಾಗುತ್ತದೆ.
-ಸುಮಾವೀಣಾ, ಹಾಸನ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು