ಸರ್ಕಾರವು ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ 2008ರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ನೀಡಿ, ಇತರ ವಿಷಯಗಳ ಹಾಗೆ ಪಾಠ ಬೋಧನೆ ಮಾಡಿಸಿ, ಪರೀಕ್ಷೆ ನಡೆಸಿ, ಅಂಕಪಟ್ಟಿಯಲ್ಲಿ ಅಂಕಗಳನ್ನು ದಾಖಲಿಸುತ್ತಿದೆ. ತಾತ್ವಿಕ ಪಾಠಗಳನ್ನು ತರಗತಿ ಕೋಣೆಯಲ್ಲಿಯೂ ಪ್ರಾಯೋಗಿಕ ಪಾಠಗಳನ್ನು ಮೈದಾನದಲ್ಲಿಯೂ ಈವರೆಗೆ ನಡೆಸಲಾಗುತ್ತಿತ್ತು. ಆದರೆ ಈಗ ಅಂತಹ ಅವಕಾಶ ಇಲ್ಲವಾಗಿದೆ.

ಹೀಗಾಗಿ, ಪ್ರಸ್ತುತ ಮಕ್ಕಳಿಗಾಗಿ ಚಂದನ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳ ಪಟ್ಟಿಯಲ್ಲಿ ದೈಹಿಕ ಶಿಕ್ಷಣದ ತಾತ್ವಿಕ ಪಾಠ ಬೋಧನೆಗೆ ಕಾರ್ಯಯೋಜನೆ ರೂಪಿಸಬೇಕಾಗಿದೆ. ಇಲ್ಲವಾದರೆ ಆರೋಗ್ಯ, ಯೋಗ ಮತ್ತು ಆಟಗಳ ವಿಷಯವಾಗಿ ಪಡೆಯಬಹುದಾದ ಬೌದ್ಧಿಕ ಜ್ಞಾನದ ಕಲಿಕೆಯಿಂದ ಮಕ್ಕಳು ವಂಚಿತರಾಗುತ್ತಾರೆ.

– ಜಿ.ಪಳನಿಸ್ವಾಮಿ ಜಾಗೇರಿ,ಸೂರಾಪುರ, ಕೊಳ್ಳೇಗಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.