ಸೋಮವಾರ, ಫೆಬ್ರವರಿ 17, 2020
27 °C

ಪರಿಣಾಮಕಾರಿ ತಂತ್ರಜ್ಞಾನ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಂಚಾರಿ ತಾರಾಲಯ ಒದಗಿಸುವ ಅಗತ್ಯ ಕುರಿತಾದ ವಿಶೇಷ ವರದಿ (ಪ್ರ.ವಾ., ಫೆ. 4) ಸಕಾಲಿಕವಾದದ್ದು. ಮಕ್ಕಳಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಬಲ್ಲ ಪರಿಣಾಮಕಾರಿ ತಂತ್ರಜ್ಞಾನ ಇದು. ಇದನ್ನೊಂದು ಕಲಿಕಾತಂತ್ರವಾಗಿ ಶಿಕ್ಷಣ ಇಲಾಖೆಯು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.

ಆದರೆ, ಇಲ್ಲೊಂದು ಕಾಳಜಿ ವಹಿಸಬೇಕಾದ ಸಂಗತಿಯಿದೆ. ರಬ್ಬರ್ ಮತ್ತು ರೆಕ್ಸಿನ್ ಮಿಶ್ರಿತ ವಸ್ತುವಿನಿಂದ ಮಾಡಿರುವ ವಿಶೇಷ ‘ಚೀಲ’ವೊಂದರ ಒಳಗೆ ಗಾಳಿ ತುಂಬಿಸಿ, ಈ ತಾತ್ಕಾಲಿಕ ತಾರಾಲಯವನ್ನು ಸ್ಥಾಪಿಸುತ್ತಾರಷ್ಟೇ.

ರಾಜ್ಯದ ವಿವಿಧೆಡೆ ಈ ಬಗೆಯ ತಾರಾಲಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ನಾನೂ 2-3 ಸಲ ವೀಕ್ಷಣೆ ಮಾಡಿದ್ದೇನೆ. ಇದರೊಳಗೆ ಕುಳಿತಾಗ ಸೆಕೆಯಾಗಿ, ಬೆವತ ಅನುಭವ ನಮ್ಮದು. ಬಿಸಿಗಾಳಿಯಿಂದಾಗಿ ಉಸಿರುಕಟ್ಟಿದ ಅನುಭವವೂ ಆಯಿತು. ಉಬ್ಬಸದ ಪ್ರಕೃತಿಯವರಿಗಂತೂ ಇನ್ನೂ ಕಷ್ಟ. ಹೀಗಾಗಿ, ಇದರೊಳಗೆ ಸಾಕಷ್ಟು ಶುದ್ಧಗಾಳಿ ಹಾದುಹೋಗುವಂತೆ ಹಾಗೂ ಒಳಗಿನ ತಾಪಮಾನ ತಂಪಾಗಿರುವಂತೆ, ಈ ಉಪಕರಣದ ವಾತಾಯನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ.

ಈ ದಿಸೆಯಲ್ಲಿ ಇದರ ಉತ್ಪಾದಕರು ಹಾಗೂ ಇದನ್ನು ಬಳಸುತ್ತಿರುವ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ತೀವ್ರ ಗಮನಹರಿಸಬೇಕಾಗಿ ಕೋರಿಕೆ. ಉಳಿದಂತೆ, ಇದು ಖಂಡಿತವಾಗಿಯೂ ಬಳಸಿಕೊಳ್ಳಲೇಬೇಕಾದ ತಂತ್ರಜ್ಞಾನ.

ಡಾ. ಕೇಶವ ಎಚ್. ಕೊರ್ಸೆ, ಶಿರಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)