ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ಬದಲೀ ಪ್ಲಾಸ್ಟಿಕ್ ಮೇಳ

Last Updated 17 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರಿನ ಮೇಯರ್ರೇ ದಾಳಿಗಿಳಿದು ಟನ್‌ಗಟ್ಟಲೆ ನಿಷೇಧಿತ ಪ್ಲಾಸ್ಟಿಕ್ಕನ್ನು ಜಪ್ತಿ ಮಾಡಿ ಸುದ್ದಿ ಮಾಡಿದ್ದಾರೆ. ಇದು ಬರೀ ಗ್ರಹಣಕಾಲದ ಬೀದಿನಾಟಕವಾಗದೆ ರಾಜ್ಯದ ಎಲ್ಲ ಪಟ್ಟಣಗಳಲ್ಲೂ ಆಗಾಗ ನಡೆಯುವ ಪ್ರಕ್ರಿಯೆ ಆಗಬೇಕಿದೆ. ಆದರೆ, ಇಷ್ಟು ಮಾಡಿದರೆ ಸಾಲದು. ಜನರಿಗೆ ಬದಲೀ ವಸ್ತುಗಳ ಪರಿಚಯ ಮಾಡಿಸುವುದೂ ನಗರಪಾಲಿಕೆಗಳ ಜವಾಬ್ದಾರಿ ಆಗಿರಬೇಕು.

ಕರಕುಶಲ ಮೇಳ, ಫಲಪುಷ್ಪ ಪ್ರದರ್ಶನಗಳ ಹಾಗೆ ‘ಬದಲೀ ಮೇಳ’ಗಳನ್ನೂ ಆಯೋಜಿಸಬೇಕು. ಈಗಂತೂ ಕೆರೆಯ ಜೊಂಡಿನಿಂದಲೂ ಜೋಳದ ದಂಟಿನಿಂದಲೂ ಪ್ಲಾಸ್ಟಿಕ್ ತಯಾರಿಸಬಹುದು. ತಿನ್ನಬಹುದಾದ ತಟ್ಟೆ, ಚಮಚಗಳ ಉತ್ಪಾದನೆಗೆ ತಂತ್ರಜ್ಞಾನ ಸಿದ್ಧವಿದೆ. ಮೂಲೆಗೆ ಕೂತಿದೆ ಅಷ್ಟೆ. ಇಂಥ ಯಂತ್ರಗಳ ಮತ್ತು ಬದಲೀ ವಸ್ತುಗಳ ಪ್ರದರ್ಶನಕ್ಕೆಂದೇ ‘ಹೂಡಿಕೆದಾರರ ಮೇಳ’ಗಳು ನಡೆಯಬೇಕು.

ಬಳಕೆದಾರರನ್ನು ಆಕರ್ಷಿಸಲು ಬೇಕಿದ್ದರೆ ಡಾನ್ಸ್, ಕವಿಗೋಷ್ಠಿ, ಜಾದೂ ಪ್ರದರ್ಶನ ಇತ್ಯಾದಿ ಇಡಬಹುದು. ನವೋದ್ಯಮಿಗಳಿಗೆ ತರಬೇತಿ ಮತ್ತು ಮೂಲಸೌಕರ್ಯ ನೀಡಿದರೆ ಪ್ರತಿ ವಾರ್ಡಿನಲ್ಲೂ ಒಣ ಬಾಳೆಲೆಯ ಸುಂದರ ಕಪ್ ಮತ್ತು ಕಬ್ಬಿನ ಗರಿಯ ಗರಿಗರಿ ತಟ್ಟೆ ತಯಾರಿಕೆಗೆ ಅಚ್ಚುಯಂತ್ರಗಳನ್ನು ಹೂಡಬಹುದು.

- ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT