ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ವಾಗ್ದಾಳಿ: ಇಬ್ಬಗೆ ನೀತಿ ತರವಲ್ಲ

Last Updated 27 ಮೇ 2022, 18:24 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಯೆಲ್ಲ ‘ಕುಟುಂಬ ಆಧರಿತ ಪಕ್ಷಗಳು ದೇಶದ ದೊಡ್ಡ ಶತ್ರು’ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ (ಪ್ರ.ವಾ., ಮೇ 27). ಹಾಗಿದ್ದರೆ ವರುಣ್ ಗಾಂಧಿ ಮತ್ತು ಮೇನಕಾ ಗಾಂಧಿ ಅವರಿಗೆ ತಮ್ಮದೇ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದೇಕೆ?ಮೇನಕಾ ಅವರಿಗೆ ಈ ಹಿಂದೆ ಸಚಿವೆ ಸ್ಥಾನ ಕೊಟ್ಟಿದ್ದೇಕೆ?

ತೆಲಂಗಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಈ ವಾಗ್ದಾಳಿಯನ್ನು ಪಕ್ಕದ ತಮಿಳುನಾಡು ಭೇಟಿಯ ಸಂದರ್ಭದಲ್ಲಿ ಮಾಡಲಿಲ್ಲವೇಕೆ? ತಮಿಳುನಾಡಿನಲ್ಲೂ ಕುಟುಂಬ ಆಧರಿತ ಪಕ್ಷವೇ ಅಧಿಕಾರದಲ್ಲಿಇದೆಯಲ್ಲವೇ? ಅದನ್ನು ಗಮನಿಸದಿರುವುದು ಜಾಣ ಕುರುಡಲ್ಲವೇ? ‘ಕುಟುಂಬ’ಗಳನ್ನು ಮತದಾರರುಮಾನ್ಯ ಮಾಡಿ ಚುನಾಯಿಸುತ್ತಿರುವಾಗ, ಜನಾದೇಶಕ್ಕೆ ತಲೆ ಬಾಗುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವವರ ಅಭ್ಯಂತರವೇಕೆ? ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮಾರಕವಾಗಿದ್ದರೆ ಅದರ ನಿಯಂತ್ರಣಕ್ಕೆ ಕಾನೂನು ತರಬಹುದಲ್ಲವೇ?
-ಎಂ. ಶ್ರೀಧರ ರಾವ್,ಮರಲಹಳ್ಳಿ,ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT