ಮರ್ಯಾದೆಗೇಡು: ಕಠಿಣ ಕಾನೂನು ಬೇಕು

ಪ್ರೀತಿ, ಮದುವೆಯಂತಹ ವೈಯಕ್ತಿಕ ನಿರ್ಧಾರದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಹಸ್ತಕ್ಷೇಪ ಮಾಡುವುದು ಮಾತ್ರವಲ್ಲದೆ, ಸ್ವಂತ ಮಕ್ಕಳನ್ನೇ ಕೊಲೆ ಮಾಡುವ ಹಂತಕ್ಕೆ ಪೋಷಕರು ಮುಂದಾಗುತ್ತಿರುವುದು ಆತಂಕಕಾರಿ. ಸುಪ್ರೀಂ ಕೋರ್ಟ್ ಈ ಹಿಂದೆಯೇ ಮರ್ಯಾದೆಗೇಡು ಹತ್ಯೆಯನ್ನು ಕಟುವಾಗಿ ಟೀಕಿಸಿದೆ. ಪ್ರಬುದ್ಧ ವಯಸ್ಕರು ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸಾಂವಿಧಾನಿಕ ಹಕ್ಕು ಹೊಂದಿದ್ದಾರೆ. ಆದರೆ, ಸಮಾಜದಲ್ಲಿ ಇನ್ನೂ ಬೇರೂರಿರುವ ಜಾತಿ ವ್ಯಾಮೋಹ ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿದೆ. ಸಾಮಾಜಿಕ ಜಾಗೃತಿ
ಯಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಇಂತಹ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಗೊಳಿಸಬೇಕಿದೆ. ಆಗಷ್ಟೆ ಕ್ರೂರ ಮನಸ್ಸುಗಳಿಗೆ ಲಗಾಮು ಹಾಕಲು ಸಾಧ್ಯ.

⇒ಲಾವಣ್ಯ ಬಿ.ಜೆ., ಚಿಕ್ಕಮಗಳೂರು

ಫಾತಿಮಾ: ಮೌನಕ್ರಾಂತಿಯ ಸಂಕೇತ

19ನೇ ಶತಮಾನವೆಂದರೆ ಸಾಮಾಜಿಕ ಕಟ್ಟುಪಾಡುಗಳು ಉತ್ತುಂಗದಲ್ಲಿದ್ದ ಕಾಲಘಟ್ಟ. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಪಾಪವೆಂದು ತೀರ್ಮಾನಿಸಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ಫಾತಿಮಾ ಶೇಖ್ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿದರು (ಜನವರಿ 9 ಅವರ ಜನ್ಮದಿನ). ಅವರು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ. ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರ ಜೊತೆಯಲ್ಲಿ ದಲಿತರು, ಹೆಣ್ಣುಮಕ್ಕಳು ಹಾಗೂ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣದ ಬೆಳಕನ್ನು ತಲಪಿಸಿದ ಮಹಾನ್ ಹೋರಾಟಗಾರ್ತಿ. ಫಾತಿಮಾ ಬರೀ ಒಂದು ಹೆಸರಲ್ಲ; ಶಿಕ್ಷಣದ ಮೂಲಕ ಸಮಾಜವನ್ನು ಬದಲಾಯಿಸಿದ ಮೌನಕ್ರಾಂತಿ.

⇒ಎಚ್. ನಾಗಮ್ಮ ಭಂಡಾರ್, ಹೊಸಪೇಟೆ

ಸ್ಮಾರ್ಟ್ಫೋನ್ ಗೀಳು; ಆರೋಗ್ಯ ಹಾಳು

ಆತಂಕ, ಖಿನ್ನತೆ, ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳು, ಅನಿಯಂತ್ರಿತವಾಗಿ ಅಶ್ಲೀಲ ವಿಡಿಯೊ ವೀಕ್ಷಿಸುತ್ತಾರೆ ಎಂಬುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಅಧ್ಯಯನದಿಂದ ದೃಢಪಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ನಲ್ಲಿನ ವಿಡಿಯೊ ತೋರಿಸದಿದ್ದರೆ ಊಟವನ್ನೂ ಮಾಡುವುದಿಲ್ಲ. ಮೊಬೈಲ್ ಕೊಡಿಸಿಲ್ಲವೆಂದು ಪೋಷಕರ ಮೇಲೆ ಹಲ್ಲೆ ನಡೆಸಿದ ಘಟನೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಈ ಮೊಬೈಲ್ ಗೀಳು ಮಕ್ಕಳಿಗೆ ಮಾನಸಿಕ ಕಾಯಿಲೆಯಾಗಿ ಪರಿಣಮಿಸುತ್ತದೆ.

⇒ವಸಂತ ಕುಮಾರ್ ಸಿ., ಚಿತ್ರದುರ್ಗ

‘ಘಟ್ಟದಜೀವ’ದ ಹೋರಾಟ ಮುಂದುವರಿಸಿ

ಮಾಧವ ಗಾಡ್ಗೀಳ್ ಅವರು ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಆಜೀವಪರ್ಯಂತ ಹೋರಾಡಿದ ಮಹನೀಯರು. ಅವರನ್ನು ಆಧುನಿಕ ಕಾಲದ ‘ಭೀಷ್ಮ’ ಎಂದು ಕರೆದರೂ ಅತಿಶಯೋಕ್ತಿಯಲ್ಲ. ಪಶ್ಚಿಮಘಟ್ಟಗಳ ಬಗ್ಗೆ ಒಬ್ಬ ಪ್ರೇಮಿಯಂತೆ ಭಾವನಾಲೋಕದಲ್ಲಿ ವಿಹರಿಸುತ್ತಾ ಕೂರದೇ ಅದರ ಸಂರಕ್ಷಣೆಯು ಜೀವಿತದ ಗುರಿಯೆಂದು ತಿಳಿದು ಹೋರಾಟಕ್ಕಿಳಿದರು. ಘಟ್ಟದ ಪರಿಸರದಲ್ಲಿ ಬಾಳಿ ಬದುಕಿದ ಜನಸಮುದಾಯದ ಕಷ್ಟಕಾರ್ಪಣ್ಯ ತಿಳಿದು ಅಹರ್ನಿಶಿ ಹೋರಾಡಿದರು. ಆದರೆ ಸರ್ಕಾರಗಳಾಗಲೀ ಬುದ್ಧಿವಂತರಾಗಲೀ ಅವರ ಸೇವೆಯನ್ನು ಪುರಸ್ಕರಿಸದೆ ಟೀಕೆ ಮಾಡುತ್ತಾ ಕುಳಿತರು. ಇಂಥ ಕಾರ್ಯನಿಷ್ಠ ಯೋಧರು ನಮ್ಮ ಭಾಗ್ಯದಲ್ಲಿ ಇರಲು ಸಾಧ್ಯವೇ? ಅವರ ಹೋರಾಟವನ್ನು ಮುಂದುವರಿಸಬೇಕಿದೆ.

⇒ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಕಸಾಪ ಅಧ್ಯಕ್ಷರಿಗೆ ವಿಚಾರಣೆಗೇಕೆ ಭಯ?

‘ನನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆಯು ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನವಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಲವತ್ತುಕೊಂಡಿದ್ದಾರೆ. ಅವರಿಗೆ ಈ ಅನುಮಾನ ಏಕೆ ಬಂತು? ಅವರಲ್ಲಿ ಖರ್ಚಿನ ಎಲ್ಲಾ ದಾಖಲೆಗಳೂ ಇದ್ದಾಗ ಹೆದರುವ ಅಗತ್ಯವಾದರೂ ಏನಿದೆ? ವಿಚಾರಣೆ ವ್ಯತಿರಿಕ್ತವಾಗಿ ಬಂದರೂ ದಾಖಲೆಗಳು ಸರಿಯಾಗಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಲ್ಲವೇ? ಅಧ್ಯಕ್ಷರು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿಲ್ಲ; ಬಹುಮತದ ನಂತರ ಚಟುವಟಿಕೆಗಳು ಜಾರಿಗೆ ಬಂದಿವೆಯೆಂದು ಹೇಳುತ್ತಿದ್ದಾರೆ. ಇದು ನಿಜವೇ ಆಗಿದ್ದರೆ, ಎಲ್ಲಾ ಜಿಲ್ಲಾ ಅಧ್ಯಕ್ಷರನ್ನೂ ಸೇರಿಸಿಕೊಂಡು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಹುದಲ್ಲವೆ?

⇒ತಾ.ಸಿ. ತಿಮ್ಮಯ್ಯ, ಬೆಂಗಳೂರು

ಜಿಡಿಪಿ ಮತ್ತು ಜೀವನದ ಗುಣಮಟ್ಟ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7.4ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಜಿಡಿಪಿ ಹೆಚ್ಚಾದ ತಕ್ಷಣ ಜನರು ಅಭಿವೃದ್ಧಿ ಹೊಂದಿದ್ದಾರೆ ಎಂದರ್ಥವೇ? ಪ್ರತಿ ವರ್ಷವೂ ಜಿಡಿಪಿ ಏರುಗತಿಯಲ್ಲಿದೆ. ಆದರೆ, ಇಂದಿಗೂ ಬಡತನ, ನಿರುದ್ಯೋಗ, ಅನಕ್ಷರತೆ ಇದೆ. ಜಿಡಿಪಿ ಆಧಾರದ ಮೇಲೆ ದೇಶದ ನಿಜವಾದ ಪ್ರಗತಿಯನ್ನು ಬಿಂಬಿಸುವುದರಲ್ಲಿ ಅರ್ಥವಿಲ್ಲ. ಜನರ ಜೀವನಮಟ್ಟ ಸುಧಾರಣೆಯಾದಾಗಷ್ಟೆ ದೇಶದ ಪ್ರಗತಿ ಸಾಧ್ಯ.

⇒ರಾಹುಲ್ ಹಂಚಿನಾಳ, ದಾಂಡೇಲಿ

ಜಿಡಿಪಿ ಮತ್ತು ಜನರ ಜೀವನಮಟ್ಟ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7.4ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಜಿಡಿಪಿ ಹೆಚ್ಚಾದ ತಕ್ಷಣ ಜನರು ಅಭಿವೃದ್ಧಿ ಹೊಂದಿದ್ದಾರೆ ಎಂದರ್ಥವೇ? ಪ್ರತಿ ವರ್ಷವೂ ಜಿಡಿಪಿ ಏರುಗತಿಯಲ್ಲಿದೆ. ಆದರೆ, ಇಂದಿಗೂ ಬಡತನ, ನಿರುದ್ಯೋಗ, ಅನಕ್ಷರತೆ, ಮೂಲಸೌಕರ್ಯದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಜಿಡಿಪಿ ಅಂಕಿ-ಅಂಶದ ಆಧಾರದ ಮೇಲೆ ದೇಶದ ನಿಜವಾದ ಪ್ರಗತಿಯನ್ನು ಬಿಂಬಿಸುವುದರಲ್ಲಿ ಅರ್ಥವಿಲ್ಲ. ಜನರ ಜೀವನಮಟ್ಟ ಸುಧಾರಣೆಯಾದಾಗಷ್ಟೆ ದೇಶದ ಪ್ರಗತಿ ಸಾಧ್ಯ.

ರಾಹುಲ್ ಹಂಚಿನಾಳ, ದಾಂಡೇಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.