ಪಕ್ಷಪಾತದ ಜಾಹೀರಾತು ಕೊನೆಗೊಳ್ಳಲಿ

ಜಾಹೀರಾತುಗಳಲ್ಲಿ ಕರಿಯ ಮೈಬಣ್ಣದ ವ್ಯಕ್ತಿಗಳನ್ನು ಗ್ರಾಮೀಣರನ್ನಾಗಿ, ರೈತರನ್ನಾಗಿ, ಕೂಲಿಕಾರರನ್ನಾಗಿ, ನಗರಗಳ ಕಾರ್ಮಿಕರನ್ನಾಗಿ, ಬಡವರನ್ನಾಗಿ, ನಿರಕ್ಷರಿಗಳನ್ನಾಗಿ, ಅಲ್ಪಜ್ಞಾನಿಗಳನ್ನಾಗಿ ಬಿಂಬಿಸಲಾಗುತ್ತಿದೆ! ಇವರಿಗೆ ಬಿಳಿ ಮೈಬಣ್ಣದವರು ತಿಳಿಹೇಳುವ ಅಥವಾ ನೆರವು ನೀಡುವ ಜಾಹೀರಾತುಗಳಿಗೂ ಕೊರತೆಯಿಲ್ಲ! ಜಾಹೀರಾತುದಾರರ ಈ ನಡೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದೃಷ್ಟಿಗಳಿಂದ ಸರಿಯಲ್ಲ. ವರ್ಣಪಕ್ಷಪಾತಿ ಜಾಹೀರಾತುಗಳು ಎಳೆಯರ ಮನಗಳಲ್ಲಿ ಯಾವ ರೀತಿಯ ಅಭಿಪ್ರಾಯಗಳನ್ನು ಮೂಡಿಸುತ್ತವೆ ಎಂಬುದನ್ನೂ ಚಿಂತಿಸಬೇಕಾಗಿದೆ.

ಖಾಸಗಿ ಕಂಪನಿಗಳಾದರೋ ಜನಾಕರ್ಷಣೆಯ ನೆಪಗಳನ್ನು ಹೇಳಬಹುದು. ಬ್ಯಾಂಕುಗಳು, ಜೀವವಿಮಾ ಕಂಪನಿ ಮೊದಲಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಸರ್ಕಾರಿ ಜಾಹೀರಾತುಗಳೂ ಇದೇ ನಿಟ್ಟಿನಲ್ಲಿ ಸಾಗುತ್ತಿರುವುದು ವಿಪರ್ಯಾಸ. ಸರ್ಕಾರಿ ಯೋಜನೆಗಳ ಜಾಹೀರಾತುಗಳಲ್ಲಿ ಫಲಾನುಭವಿಗಳ ಚಿತ್ರಗಳನ್ನು ಬಳಸುವಾಗ ನಡೆಯುತ್ತಿರುವ ಈ ಚೋದ್ಯವು, ಮೇಲೆ ಹೇಳಿದಂಥ ಜನರು ಮಾತ್ರ ಸರ್ಕಾರಗಳ ವಿವಿಧ ಯೋಜನೆಗಳ ನೆರವು ಪಡೆಯುತ್ತಿದ್ದಾರೆ ಮತ್ತು ಅದರಿಂದಾಗಿಯೇ ಅವರು ಎರಡು ಹೊತ್ತು ಉಣ್ಣಲು ಸಾಧ್ಯವಾಗುತ್ತಿದೆ ಎಂದು ತಪ್ಪು ಕಲ್ಪನೆ ಮೂಡಿಸುವಂತಿದೆ! ಇದು ಆ ಜನರಿಗೆ ಎಸಗುತ್ತಿರುವ ದ್ರೋಹ.

–ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಎಸ್ಐಆರ್: ಮತದಾರರ ಹಿತಾಸಕ್ತಿ ರಕ್ಷಿಸಿ

ಚುನಾವಣಾ ಆಯೋಗವು ಹನ್ನೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯಿಂದ 3.67 ಕೋಟಿ ಹೆಸರುಗಳನ್ನು ಹೊರಹಾಕಿದೆ (ಪ್ರ.ವಾ., ಡಿ. 24). ಈಗ ಎಲ್ಲ ರಾಜಕೀಯ ಪಕ್ಷಗಳು, ವಿಶೇಷವಾಗಿ ವಿರೋಧ ಪಕ್ಷದವರು ಒಣ ಹೇಳಿಕೆಗಳ ರಾಜಕೀಯ ಬಿಟ್ಟು ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಮತದಾರರ ಹಿತಾಸಕ್ತಿಯನ್ನು ಕಾಪಾಡಬೇಕು.

–ರವಿ ಯಲಿಗಾರ, ಮುನವಳ್ಳಿ

ಬುಲ್ಡೋಜರ್ ಸಂಸ್ಕೃತಿ ಇಲ್ಲಿಗೂ ಬಂತೆ?

‘ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ಹೋಬಳಿ ಕೋಗಿಲು
ಬಂಡೆ ಬಳಿ ವಾಸಿಸುತ್ತಿದ್ದ ಕೂಲಿ ಕಾರ್ಮಿಕರ ಶೆಡ್ಗಳನ್ನು ಯಾವುದೇ ನೋಟಿಸ್
ನೀಡದೆ ರಾತ್ರಿ 3 ಗಂಟೆ ಸಮಯದಲ್ಲಿ ನಾಶಗೊಳಿಸಿದ ರೀತಿ ಕ್ರೂರ ಹಾಗೂ ಅಮಾನವೀಯ. ಈ ವಿಧ್ವಂಸಕ ಕೃತ್ಯ ಎಸಗಿದವರಿಗೆ ಉತ್ತರ ಪ್ರದೇಶದ ಬುಲ್ಡೋಜರ್ ಸಂಸ್ಕೃತಿ ಉತ್ತೇಜನವನ್ನು ನೀಡಿತೆ? ಶತ್ರುಗಳ ಮೇಲೆ ಎರಗಿದಂತೆ, ವಿದ್ಯಾರ್ಥಿಗಳು ತಮ್ಮ ಪುಸ್ತಕಗಳನ್ನು ತೆಗೆದುಕೊಳ್ಳಲೂ ಅವಕಾಶ ಕೊಡದೆ, 150 ಮನೆಗಳನ್ನು ನೆಲಸಮ ಮಾಡಿದ್ದಲ್ಲದೆ, 500ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಪಾಲು ಮಾಡಿದ್ದು ಖಂಡನಾರ್ಹ. ಪೊಲೀಸ್ ಇಲಾಖೆ ಅಥವಾ ನ್ಯಾಯಾಂಗ ಇಲಾಖೆ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು.

ರಾಜಕಾರಣಿಗಳು, ಸಿನಿಮಾ ನಟರು ಅಥವಾ ಶ್ರೀಮಂತರು ರಾಜಕಾಲುವೆ ಯನ್ನೋ, ಸರ್ಕಾರಿ ಭೂಮಿಯನ್ನೋ ಒತ್ತುವರಿ ಮಾಡಿಕೊಂಡಿರುವ ಉದಾಹರಣೆ ಗಳಿವೆ. ಅಂತಹವರನ್ನು ಎತ್ತಂಗಡಿ ಮಾಡಿದ ನಿದರ್ಶನಗಳಿಲ್ಲ. ಈ ಬಡಪಾಯಿಗಳು ದಾಖಲೆಗಳನ್ನು ಹೊಂದಿದ್ದರೂ ಸಹ ಅವರ ಮನೆಗಳನ್ನು ಕೆಡವಿ ಪರಿತಪಿಸುವಂತೆ ಮಾಡಿರುವುದು ಮನುಷ್ಯತ್ವದ ದೃಷ್ಟಿಯಲ್ಲಿ ಅಕ್ಷಮ್ಯ.

–ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಚಿತ್ರೋತ್ಸವದ ಸ್ಥಳ ಬದಲಾವಣೆ ಬೇಡ

ಹದಿನೇಳನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಜ. 29ರಿಂದ ಪ್ರಾರಂಭವಾಗುತ್ತಿರುವುದು ಖುಷಿಯ ವಿಷಯ. ಆದರೆ, ಪ್ರದರ್ಶನದ ಸ್ಥಳವನ್ನು ಬದಲಾಯಿಸಿರುವುದು ನಿರಾಶೆ ತಂದಿತು. ನಿಯೋಜಿತ ಸ್ಥಳದ ಚಿತ್ರಮಂದಿರಗಳಲ್ಲಿ ಕಡಿಮೆ ಆಸನಗಳಿರುವುದರಿಂದ, ಸುಮಾರು ಆರು ನೂರು ಸಿನಿಮಾಸಕ್ತರು ಉತ್ಸವದಲ್ಲಿ ಭಾಗಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಈ ಹಿಂದಿನ ಸ್ಥಳಕ್ಕೆ ಮೆಟ್ರೋ ಸ್ಟೇಷನ್ ಹತ್ತಿರವಿದ್ದು ಸಾರ್ವಜನಿಕರಿಗೆ ಅನುಕೂಲಕರವಾಗಿತ್ತು. ಮೇಲಿನ ಎಲ್ಲಾ ಕಾರಣಗಳನ್ನು ಪರಿಗಣಿಸಿ, ಪ್ರದರ್ಶನ ಸ್ಥಳವನ್ನು ಬದಲಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಲಿ.

–ಚಂದ್ರಪ್ರಭ ಕಠಾರಿ, ಬೆಂಗಳೂರು

ಜಾತಿ ಹೆಸರಲ್ಲಿ ಕ್ರೌರ್ಯ: ಕಠಿಣ ಶಿಕ್ಷೆ ಅಗತ್ಯ

ಮನುಷ್ಯರು ಪರಸ್ಪರ ಕೊಂದುಕೊಳ್ಳುವ ಜಾತಿಕ್ರೌರ್ಯ ಜೀವಂತವಿದೆ ಎನ್ನುವುದಕ್ಕೆ ಹುಬ್ಬಳ್ಳಿ ಜಿಲ್ಲೆಯಲ್ಲಿ ನಡೆದಿರುವ ಗರ್ಭಿಣಿ ಹೆಣ್ಣುಮಗಳ ಹತ್ಯೆಯೇ ಸಾಕ್ಷಿ. ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಹುಡುಗಿಯ ತಂದೆ
ಹಾಗೂ ಕುಟುಂಬದವರು ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿ,
ಗರ್ಭಿಣಿಯಾಗಿದ್ದಮನೆಮಗಳನ್ನೇ ಕೊಂದಿದ್ದಾರೆ. ಜಾತಿಯ ನಶೆಯಲ್ಲಿ ಅಪರಾಧ ವನ್ನು ಎಸಗುವ ದುಷ್ಟರನ್ನು ಸಂವಿಧಾನದ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸ ಬೇಕಾದುದು ಅಗತ್ಯ.

–ಪವನ್ ಜಯರಾಂ, ಚಾಮರಾಜನಗರ

ಸಿನಿಮಾ ನಟರೇ, ಕಚ್ಚಾಟ ನಿಲ್ಲಿಸಿ...

ಅರವತ್ತು ಎಪ್ಪತ್ತರ ದಶಕದ ಸಿನಿಮಾರಂಗದಲ್ಲಿ ಕೌಟುಂಬಿಕ ವಾತಾವರಣ ಇತ್ತು. ಯಾವುದೇ ಸಿನಿಮಾ ಗೆದ್ದರೂ ಉದ್ಯಮದ ನಟ ನಟಿಯರೆಲ್ಲ ಸಂತೋಷಕೂಟದಲ್ಲಿ ಭಾಗಿಯಾಗುತ್ತಿದ್ದರು. ಈಗ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಚಿತ್ರ ನಟರ ಗುಂಪುಗಳ ನಡುವೆ ರಾಜಕೀಯ ಶುರುವಾಗಿದೆ. ನನ್ನ ಸಿನಿಮಾ ಮಾತ್ರ ಗೆಲ್ಲಬೇಕು ಎನ್ನುವ ಮನೋಭಾವ ಸರಿಯಲ್ಲ. ಸಿನಿಮಾ ಚೆನ್ನಾಗಿದ್ದರೆ ಗೆಲ್ಲುತ್ತದೆ. ಗುಂಪುಗಾರಿಕೆ ಬೇಡ. ಜನರಿಗೆ ವಿಮರ್ಶೆ ಮಾಡುವ ತಿಳಿವಳಿಕೆ ಬಂದಿದೆ. ಹೀಗೆ ಜಗಳ–ದ್ವೇಷ ಮಾಡಿ ಅಭಿಮಾನಿಗಳ ಮನಸ್ಸನ್ನು ನೋಯಿಸಬೇಡಿ.

–ಎಂ.ಎಸ್. ಉಷಾ ಪ್ರಕಾಶ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.