ಶನಿವಾರ, ಸೆಪ್ಟೆಂಬರ್ 24, 2022
21 °C

ವಾಚಕರ ವಾಣಿ | ಸಾಹಿತ್ಯ ಸಮ್ಮೇಳನ: ದಿನ ನಿಗದಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ನಿರ್ದಿಷ್ಟ ದಿನ ನಿಗದಿ ಮಾಡುವುದು ಒಳ್ಳೆಯದು. ಪ್ರತಿವರ್ಷ ಅದೇ ದಿನಗಳಂದು ಸಮ್ಮೇಳನ ಆಯೋಜನೆ ಆಗಬೇಕು. ಸರ್ಕಾರ ಅಥವಾ ಇನ್ನಾವುದೋ ಬಾಹ್ಯ ಒತ್ತಡಗಳು ದಿನಾಂಕ ನಿಗದಿಯ ಮೇಲೆ ಪರಿಣಾಮ ಬೀರಬಾರದು. ರಾಜ್ಯೋತ್ಸವ ಮಾಸ ನವೆಂಬರ್‌ನಲ್ಲಿ ಮೂರು ದಿನಗಳನ್ನು ಗೊತ್ತುಪಡಿಸಲಿ. ಪ್ರತಿವರ್ಷ ಆ ನಿಗದಿತ ದಿನಗಳಂದೇ ಸಮ್ಮೇಳನ ನಡೆಯಲಿ. ಸರ್ಕಾರದ ಅನುದಾನವು ಅಕ್ಟೋಬರ್ ತಿಂಗಳಲ್ಲೇ ಬಿಡುಗಡೆ ಆಗಲಿ. ಸಮ್ಮೇಳನದಲ್ಲಿ ಭಾಗವಹಿಸಲು ಕನ್ನಡ ಮನಸ್ಸುಗಳು ಸಿದ್ಧವಾಗಿರಲು ಇದರಿಂದ ಅನುಕೂಲ ಆಗುತ್ತದೆ.

ಮಲ್ಲಿಕಾರ್ಜುನ, ಸುರಧೇನುಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.