ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಸಾಮಾಜಿಕ ಭದ್ರತೆ ಹೆಚ್ಚಿಸಿ

Last Updated 14 ಜನವರಿ 2019, 20:00 IST
ಅಕ್ಷರ ಗಾತ್ರ

ಭಾರತದಲ್ಲಿ ಸರ್ಕಾರಿ ಒಡೆತನದ ಹಲವಾರು ಕೈಗಾರಿಕೆಗಳಿವೆ. ಈ ಪ್ರಮಾಣಕ್ಕಿಂತಲೂ ಹೆಚ್ಚು ಖಾಸಗಿ ಒಡೆತನದ ಕೈಗಾರಿಕೆಗಳಿವೆ. ಸರ್ಕಾರಿ ಒಡೆತನದ ಕೈಗಾರಿಕೆಗಳಲ್ಲಿ ನೀಡುತ್ತಿರುವ ಸೌಲಭ್ಯ, ಸುರಕ್ಷತೆ, ಸಾಮಾಜಿಕ ಭದ್ರತೆಯಂತಹ ಸವಲತ್ತುಗಳನ್ನು ಖಾಸಗಿ ಒಡೆತನದ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೀಡುತ್ತಿಲ್ಲ.

ಖಾಸಗಿ ಕೈಗಾರಿಕೆಗಳಲ್ಲಿ ಸಿದ್ಧವಾಗುತ್ತಿರುವ ಸರುಕುಗಳನ್ನು ನಾವೆಲ್ಲರೂ ಉಪಯೋಗಿಸುತ್ತಿದ್ದೇವೆ. ಹೀಗಿದ್ದರೂ ಅಲ್ಲಿನ ಕಾರ್ಮಿಕರಿಗೆ ಉದ್ಯೋಗ ಸುರಕ್ಷತೆ ಇಲ್ಲದಿರುವುದು ವಿಷಾದನೀಯ. ಇತ್ತೀಚೆಗೆ ಎರಡು ದಿನಗಳ ಮುಷ್ಕರಕ್ಕೆ ದೇಶದಾದ್ಯಂತ ಕರೆ ಕೊಟ್ಟರೂ ಎಷ್ಟೋ ಕೈಗಾರಿಕೆಗಳು ಆ ದಿನಗಳಲ್ಲಿ ಕೆಲಸನಿರ್ವಹಿಸಿರುವುದು ಕಾರ್ಮಿಕರ ಅಸಹಾಯಕತೆಯನ್ನು ಬಿಂಬಿಸುತ್ತದೆ. ಖಾಸಗಿ ವಲಯದ ಕಾರ್ಮಿಕರಿಗೆ ನೀಡುವ ವೇತನವು ಜೀವನ ನಿರ್ವಹಣೆಗೆ ಸಾಲದಾಗಿದೆ. ಮಹಿಳಾ-ಪುರುಷರ ವೇತನದಲ್ಲಿ ತಾರತಮ್ಯ ನಡೆಯುತ್ತಲೇ ಇದೆ. ಕೆಲವು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಸುಸಜ್ಜಿತ ಶೌಚಾಲಯ ಸೌಲಭ್ಯ, ಕುಡಿಯುವ ನೀರಿನ ಘಟಕ, ಪ್ರಥಮ ಚಿಕಿತ್ಸಾ ಘಟಕಗಳಿಲ್ಲ. ಕಾರ್ಮಿಕರು ದೇಶದ ಆತ್ಮವಿದ್ದಂತೆ. ಅವರಿಗೆ ಸಾಮಾಜಿಕ ಭದ್ರತೆಯಿಲ್ಲದೆ ಈ ದೇಶದ ಅಭಿವೃದ್ಧಿ ಆಗದು.

–ಎಚ್.ಪಿ. ಮಹದೇವಸ್ವಾಮಿ,ಹೊರಳಹಳ್ಳಿ, ಟಿ. ನರಸೀಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT