ಬುಧವಾರ, ಆಗಸ್ಟ್ 10, 2022
20 °C

ಹೊರಗಿದ್ದರೆ ಪ್ರತಿಭಟಿಸುತ್ತಿದ್ದರೇನೊ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ವರ್ಷಗಳ ಹಿಂದೆ ಪೆಟ್ರೋಲ್ ದರ ಏರಿಕೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದ್ದ ಸಂಗತಿ ಪ್ರಕಟವಾಗಿದೆ. (25 ವರ್ಷಗಳ ಹಿಂದೆ ಅಂಕಣ: ಜುಲೈ 4). ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹಠಾತ್ತಾಗಿ ಶೇ 25ರಷ್ಟು ಹೆಚ್ಚಿಸಿದ್ದಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿವಿಧ ಪಕ್ಷಗಳು ಈ ಕ್ರಮವನ್ನು ಉಗ್ರವಾಗಿ ಖಂಡಿಸಿದ್ದವು ಆಗ. ಏನು ಮಾಡುವುದು, ಆಗ ಪ್ರತಿಭಟಿಸಿದವರಲ್ಲಿ ಸೇರಿದ್ದವರು ಈಗ ಸರ್ಕಾರ ನಡೆಸುತ್ತಿದ್ದಾರೆ. ಹೊರಗಿದ್ದರೆ ಖಂಡಿತ ಉಗ್ರ ಪ್ರತಿಭಟನೆ ನಡೆಸುತ್ತಿದ್ದರೇನೊ!

–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು