ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಮೌಲ್ಯಮಾಪನ: ಹೀಗಿರಲಿ ವ್ಯವಸ್ಥೆ

Last Updated 2 ಜೂನ್ 2020, 20:15 IST
ಅಕ್ಷರ ಗಾತ್ರ

ಈ ಬಾರಿಯ ಪಿಯುಸಿ ಮೌಲ್ಯಮಾಪನವು ಕೊರೊನಾದಿಂದಾಗಿ ಗೊಂದಲದಲ್ಲಿ ಸಿಲುಕಿದೆ. ವಸತಿಗೃಹಗಳು ಮತ್ತು ಹೋಟೆಲ್‌ಗಳು ಇನ್ನೂ ಪ್ರಾರಂಭವಾಗಿಲ್ಲ. ಮೌಲ್ಯಮಾಪನ ಕಾರ್ಯದಲ್ಲಿ ತೊಡಗಬೇಕಾದವರನ್ನು ಇದು ತೊಂದರೆಗೆ ಸಿಲುಕಿಸಿದೆ.

ಮನೆಯಿಂದ ಹೊರಗೆ ತಂಗುವುದು, ಗುಂಪಿನಲ್ಲಿ ಇರುವುದು ಸುರಕ್ಷಿತವಲ್ಲವಾದ್ದರಿಂದ ಯಾವ ಜಿಲ್ಲೆಯಲ್ಲಿ ಉಳಿದುಕೊಂಡರೂ ಉಪನ್ಯಾಸಕರು ಇದೇ ಅಪಾಯವನ್ನು ಎದುರಿಸುತ್ತಾರೆ. ಹೀಗಾಗಿ ಇಲಾಖೆಯು ಉತ್ತರ ಪತ್ರಿಕೆಗಳನ್ನು ಜಿಲ್ಲಾವಾರು ಹಂಚಿಕೆ ಮಾಡುವುದು ಉಚಿತವೆನಿಸುತ್ತದೆ.

ಆಗ ತಮ್ಮ ಊರುಗಳಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಬಂದು ಹೋಗಲು ಸಾಧ್ಯವಿರುವ ಎಲ್ಲ ವಿಷಯಗಳ ಎಲ್ಲ ಉಪನ್ಯಾಸಕರಿಗೆ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಬಹುದು. ವಿಜ್ಞಾನ ವಿಷಯಕ್ಕೆ ಕೆಲವು ಜಿಲ್ಲೆಗಳು ಉಪನ್ಯಾಸಕರ ಕೊರತೆ ಎದುರಿಸಬಹುದು. ಅಲ್ಲಿ, ಇತ್ತೀಚೆಗೆ ನಿವೃತ್ತರಾದ ಹಾಗೂ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರ ನೆರವು ಪಡೆಯಬಹುದು.

–ಮಹಾಂತೇಶ, ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT