ಗುರುವಾರ , ಆಗಸ್ಟ್ 18, 2022
25 °C

ಅತಿವೃಷ್ಟಿಯಾದರೆ ವಿಚ್ಛೇದನ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮಳೆ ಬರಲಿ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಮಾಡುತ್ತಿರುವ ಕುರಿತ ವರದಿಗಳನ್ನು ಓದಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಪ್ರಪಂಚದಾದ್ಯಂತ ಕಾಡುಗಳ ವ್ಯಾಪ್ತಿ ಕ್ಷೀಣಿಸುತ್ತಿದೆ, ಭಾರತದಲ್ಲಂತೂ ಕಾಡುಗಳು ಅಪಾಯಕಾರಿ ಮಟ್ಟದಲ್ಲಿ ಕ್ಷೀಣಿಸಿವೆ. ಇದರ ನೇರ ಪರಿಣಾಮ ಜಲಚಕ್ರದ ಮೇಲಾಗಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿವೆ. ಇದಕ್ಕೆ ಪರಿಹಾರವೆಂದರೆ ಕಾಡುಗಳನ್ನು ಪುನಶ್ಚೇತನಗೊಳಿಸುವುದು. ಕಾಡುಗಳ ವ್ಯಾಪ್ತಿಯನ್ನು ಹೆಚ್ಚಿಸಲು ಕೆಲವು ರಾಷ್ಟ್ರಗಳು ಕಾರ್ಯೋನ್ಮುಖ ಆಗಿವೆ. ಆದರೆ ನಮ್ಮಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಂತಹ ಕಾರ್ಯಗಳು ನಡೆಯುತ್ತಿಲ್ಲ.

ಪರಿಸರವನ್ನು ಸಂರಕ್ಷಿಸುವುದು, ಅರಣ್ಯ ಬೆಳೆಸುವುದು ಅರಣ್ಯ ಇಲಾಖೆಯ ಕೆಲಸ. ಸಾರ್ವಜನಿಕರಿಗೂ ಇದಕ್ಕೂ ಸಂಬಂಧವಿಲ್ಲ ಎಂಬುದು ನಮ್ಮಲ್ಲಿ ಹೆಚ್ಚಿನವರ ನಂಬಿಕೆ. ಜೊತೆಗೆ ಗಿಡಮರಗಳನ್ನು ಬೆಳೆಸಲು ನಮ್ಮಲ್ಲಿ ಸೋಮಾರಿತನ. ಜಲಚಕ್ರದ ಅಸಮತೋಲನವನ್ನು ಸರಿದೂಗಿಸಲು ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವುದು ಮತ್ತು ಈಗಾಗಲೇ ನೆಟ್ಟಿರುವ ಗಿಡಗಳನ್ನು ರಕ್ಷಿಸುವ ಕೆಲಸಗಳಾಗಬೇಕೇ ವಿನಾ ಈ ರೀತಿ ಕತ್ತೆ , ಕಪ್ಪೆಗಳಿಗೆ ಮದುವೆ ಮಾಡುವುದಲ್ಲ. ಕತ್ತೆಗಳಿಗೆ ಮದುವೆ ಮಾಡಿದ ದಿನ ಮಳೆ ಬಂದರೆ ಅದು ಕಾಕತಾಳೀಯ. ಅದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಒಂದು ವೇಳೆ ಕತ್ತೆಗಳು, ಕಪ್ಪೆಗಳ ಮದುವೆ ಮಾಡಿಸಿದ್ದರಿಂದಲೇ ಮಳೆ ಬಂದಿತು ಎನ್ನುವುದಾದರೆ, ಮುಂದೆ ಅತಿವೃಷ್ಟಿಯಾದರೆ ಅದನ್ನು ತಡೆಯಲು ಈಗ ಮದುವೆ ಮಾಡಿಸಿರುವ ಕತ್ತೆ, ಕಪ್ಪೆ ದಂಪತಿಗಳಿಗೆ ವಿಚ್ಛೇದನ ಕೊಡಿಸಬೇಕೆ? ಸಮಾಜ ಇನ್ನಾದರೂ ಇಂತಹ ಮೌಢ್ಯಗಳಿಂದ
ಹೊರಬರಲಿ.

– ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು