ಗುರುವಾರ , ಅಕ್ಟೋಬರ್ 6, 2022
23 °C

ಯಾತ್ರೆಯ ಪ್ರಸ್ತಾಪ ಸರಿಯೇ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಕನ್ನಡ ಮನಸ್ಸುಗಳ ಜೋಡಣೆ ಯಾರ ಹೊಣೆ’ ಎಂಬ ಬರಹದಲ್ಲಿ ರಘುನಾಥ ಚ.ಹ. ಅತ್ಯಂತ ಪ್ರಸ್ತುತವಾದ ಮತ್ತು ಸಕಾಲಿಕವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ ಮತ್ತು ಅದರಲ್ಲಿ ಅವರು ಪ್ರಸ್ತಾಪಿಸಿರುವ ಹಲವು ವಿಚಾರಗಳು ವಾಸ್ತವವಾಗಿವೆ. ಈಚಿನ ವರ್ಷಗಳಲ್ಲಿ ಬರಹಗಾರರಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಗುಂಪುಗಳಾಗಿರುವುದಷ್ಟೇಅಲ್ಲ, ಆ ಗುಂಪುಗಳು ಕೆಲವೊಮ್ಮೆ ಸಂವಾದ ನಡೆಸಲಾರದಷ್ಟು ವಿಂಗಡವಾಗಿಬಿಟ್ಟಿವೆಯೇನೋ ಎಂದು ಆತಂಕಪಡುವಂತೆ ಆಗಿರುವುದೂ ಸುಳ್ಳಲ್ಲ. ಇದಕ್ಕೆ ಜಾತಿ, ಸಿದ್ಧಾಂತ ಮತ್ತು ಪಕ್ಷ ರಾಜಕಾರಣಗಳತ್ತ ಅತಿಯಾದ ಒಲವು ತೋರುತ್ತ ಬಂದಿರುವ ಬರಹಗಾರರೇ ಕಾರಣರೆಂಬುದಕ್ಕೆ ಹೆಚ್ಚಿನ ಸಂಶೋಧನೆಯೇನೂ ಅಗತ್ಯವಿಲ್ಲ ಮತ್ತು ಅವರುಗಳೇ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಈಗ ಬಂದಿದೆ ಎನಿಸುತ್ತದೆ.

ಆದರೆ ಇಷ್ಟು ಒಳ್ಳೆಯ ಸಕಾಲಿಕವಾದ ಅವರ ಈ ಬರಹದಲ್ಲಿ, ಅದಕ್ಕೆ ಯಾವ ರೀತಿಯಲ್ಲಿಯೂ ಸಂಬಂಧವೇ ಇರದಿರುವ- ರಾಜಕೀಯ ಪಕ್ಷವೊಂದು ಮುಂದಿನ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಡೆಸುತ್ತಿರುವ ಯಾತ್ರೆಯೊಂದರ ಪ್ರಸ್ತಾಪ ಮಾಡಿರುವುದು ಪಾಯಸದಲ್ಲಿ ನೊಣ ಸಿಕ್ಕಿದಂತಾಗಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ.

⇒ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.