ಶುಕ್ರವಾರ, ಆಗಸ್ಟ್ 6, 2021
25 °C

ನಿಯಮಗಳಿಗೆ ಬೆಲೆ ಉಳಿಯುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾವೇ ನೀಡಿದ ನಿರ್ದೇಶನವನ್ನು ಆರೋಗ್ಯ ಸಚಿವ ಶ್ರೀರಾಮುಲು ಗಾಳಿಗೆ ತೂರಿದ್ದಾರೆ. ಸೋಂಕು ತಂದೊಡ್ಡಿರುವ ಆತಂಕದ ಈ ದಿನಗಳಲ್ಲಿ ಜನಸಾಮಾನ್ಯರಿಗೆ ಮಾದರಿಯಾಗಬೇಕಾದವರು ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು, ಹಾರ–ತುರಾಯಿ ಹಾಕಿಸಿಕೊಂಡು, ಹೂವು ಚೆಲ್ಲಿಸಿಕೊಳ್ಳುತ್ತಾ ಮೆರೆಯುವುದು ನಾಚಿಕೆಗೇಡು. ಸಾಮಾಜಿಕ ಅಂತರವೂ ಇಲ್ಲ, ಮುಖಗವುಸೂ ಇಲ್ಲ, ಮಂಗಳವಾದ್ಯದೊಡನೆ ನೂರಾರು ಜನರ ಗುಂಪು ಮೆರವಣಿಗೆ. ಇನ್ನು ಸಾಮಾನ್ಯ ಜನ ಇವರ ಆದೇಶವನ್ನು ಹೇಗೆ ಪಾಲಿಸುವುದು?

ಜನರ ಆರೋಗ್ಯ ರಕ್ಷಣೆಯ ಹೊಣೆ ಹೊತ್ತವರೇ ಹೀಗಾದರೆ ಸರ್ಕಾರದ ನಿಯಮಗಳಿಗೆ ಬೆಲೆ ಇರುತ್ತದೆಯೇ? ಇವರು, ಇವರ ಜೊತೆಗೂಡಿದ್ದ ಬೇಜವಾಬ್ದಾರಿ ಶಾಸಕರು, ಮುಖಂಡರ ಮೇಲೆ ಪ್ರಕರಣ ದಾಖಲಿಸಬೇಕು. ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು

-ಅತ್ತಿಹಳ್ಳಿ ದೇವರಾಜ್, ಹಾಸನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು