ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಗೆ ಸೌಲಭ್ಯ: ಅವೈಜ್ಞಾನಿಕ ಆದೇಶ

Last Updated 5 ಮಾರ್ಚ್ 2020, 20:00 IST
ಅಕ್ಷರ ಗಾತ್ರ

‘ಮೊದಲ ಪ್ರಸವದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಉದ್ಯೋಗಸ್ಥ ಮಹಿಳೆಯರಿಗೆ ಎರಡನೇ ಬಾರಿಗೆ ಹೆರಿಗೆ ರಜೆ ಹಾಗೂ ಇತರ ಸೌಲಭ್ಯಗಳು ಅನ್ವಯವಾಗುವುದಿಲ್ಲ’ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ (ಪ್ರ.ವಾ.,ಮಾರ್ಚ್‌ 5). ಇದಕ್ಕೆ ಕೋರ್ಟ್ ಕೊಡುವ ಕಾರಣ ವಿಚಿತ್ರ ಎನಿಸುತ್ತದೆ.

ಮಹಿಳೆಯರು ತಮ್ಮ ಸೇವೆಯಲ್ಲಿ ಎರಡು ಬಾರಿ ಮಾತ್ರ ಹೆರಿಗೆ ಸೌಲಭ್ಯ ಪಡೆಯಬಹುದಾಗಿದೆ. ಅವಳಿ ಮಕ್ಕಳು ಜನಿಸಿದಾಗ ಒಂದು ಮತ್ತು ಎರಡನೇ ಮಗು ಹುಟ್ಟುವ ಸಮಯದಲ್ಲಿ ಅಂತರವಿರುತ್ತದೆ. ಆದುದರಿಂದ ಇದನ್ನು ಎರಡು ಹೆರಿಗೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿದೆ. ಪ್ರಕೃತಿಗೆ ವಿರುದ್ಧವಾದ ಮತ್ತು ಅವೈಜ್ಞಾನಿಕವಾದ ನಿಲುವೆಂದು ಇದನ್ನು ಪರಿಗಣಿಸಬೇಕಾಗುತ್ತದೆ.

ಕೆಲವು ಮಹಿಳೆಯರು ಪ್ರಥಮ ಹೆರಿಗೆಯಲ್ಲೇ ತ್ರಿವಳಿ ಹಾಗೂ ನಾಲ್ಕು ಶಿಶುಗಳನ್ನು ಪಡೆದ ನಿದರ್ಶನಗಳಿವೆ. ಇಂತಹ ಸಂದರ್ಭದಲ್ಲಿ ಈ ತೀರ್ಪಿನ ಪ್ರಕಾರ, ಮೂರು, ನಾಲ್ಕು ಹೆರಿಗೆಗಳೆಂದು ಪರಿಗಣಿಸಬೇಕಾಗುತ್ತದೆ ಹಾಗೂ ಹೆರಿಗೆ ಸೌಲಭ್ಯಗಳಿಂದ ಅವರನ್ನು ವಂಚಿತರನ್ನಾಗಿ ಮಾಡಬೇಕಾಗುತ್ತದೆ. ಒಂದು ಬಾರಿಗೆ ಇಷ್ಟೇ ಮಕ್ಕಳನ್ನು ಹೆರಬೇಕು ಎನ್ನುವುದು ಅವಳ ಕೈಯಲ್ಲಿ ಇರುತ್ತದೆಯೇ? ಅದೊಂದು ಪ್ರಕೃತಿದತ್ತ ಬೆಳವಣಿಗೆ. ಹೀಗಿರುವಾಗ, ಅಂತಹ ಮಹಿಳೆಯರನ್ನು ಪ್ರಸೂತಿ ಸೌಲಭ್ಯಗಳಿಂದ ವಂಚಿತರನ್ನಾಗಿಸುವುದು ಎಷ್ಟು ಸರಿ?

-ಕೊಂಪಿ ಗುರುಬಸಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT