ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಷ್ಟಕರ ಪರೀಕ್ಷಾ ನಿಯಮ ಅಗತ್ಯವೇ?

Last Updated 14 ಫೆಬ್ರುವರಿ 2021, 19:42 IST
ಅಕ್ಷರ ಗಾತ್ರ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಬಗೆಯ ಹುದ್ದೆಗಳನ್ನು ಭರ್ತಿ ಮಾಡಲು ಡಿಸೆಂಬರ್‌ನಿಂದ ರೈಲ್ವೆ ನೇಮಕಾತಿ ಮಂಡಳಿಯು ಪರೀಕ್ಷೆಗಳನ್ನು ಆರಂಭಿಸಿದ್ದು, ಅವು ಮಾರ್ಚ್ ಮೊದಲ ವಾರದವರೆಗೆ ನಡೆಯಲಿವೆ. ಮಂಡಳಿ ಹಾಗೂ ಪರೀಕ್ಷಾ ಮೇಲ್ವಿಚಾರಕರು ಅನುಸರಿಸುತ್ತಿರುವ ಕೆಲವು ನಿಯಮಗಳು ತರ್ಕಕ್ಕೆ ನಿಲುಕದೆ ಅಸಂಬದ್ಧವಾಗಿವೆ.

ಮಹಿಳೆಯರ ಮೂಗುತಿ, ಉಂಗುರ, ಸರ, ತಲೆಕೂದಲಿನ ಕ್ಲಿಪ್‌ಗಳನ್ನು ತೆಗೆದಿರಿಸುವುದು ಅಥವಾ ಅವುಗಳ ಮೇಲೆ ಪ್ಲಾಸ್ಟಿಕ್ ಲೇಪವನ್ನು ಹಚ್ಚಿ ಒಳಗೆ ಬಿಡುವುದು ಹಾಗೂ ಪುರುಷರ ಬೆಲ್ಟ್ ಅನ್ನು ತೆಗೆದಿರಿಸಿ ಒಳ ಹೋಗಲು ಅನುಮತಿ ನೀಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಹಾಗೂ ಶೋಚನೀಯ.

ಅನೇಕ ಆಕಾಂಕ್ಷಿಗಳು ಇದರಿಂದ ಇರಿಸುಮುರಿಸು ಅನುಭವಿಸುತ್ತಿದ್ದಾರೆ. ಇನ್ನಾದರೂ ಮಂಡಳಿಯು ಇಂತಹ ಕ್ಲಿಷ್ಟಕರ, ಅಪ್ರಯೋಜಕ ಹಾಗೂ ಅವೈಜ್ಞಾನಿಕ ನಿಯಮಗಳನ್ನು ರದ್ದುಪಡಿಸಲಿ.
-ಮಹೇಶ್ ಸಿ.ಎಚ್., ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT