ಭಾನುವಾರ, ಜೂನ್ 20, 2021
21 °C

ವಾಚಕರ ವಾಣಿ | ಹಣದ ಮೇಲಿನ ಮೋಹ ಕಡಿಮೆಯಾಗಿಲ್ಲೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ಎಂಬ ಅಭಿಪ್ರಾಯವನ್ನು ದೇಶದ ಮುಕ್ಕಾಲು ಭಾಗದಷ್ಟು ಜನ ವ್ಯಕ್ತಪಡಿಸಿದ್ದಾರೆ ಎಂಬುದು ‘ಲೋಕಲ್ ಸರ್ಕಲ್’ ಸಂಸ್ಥೆಯ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ. ಇದರಲ್ಲಿ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ನಮ್ಮ ಸಾರ್ವಜನಿಕ ಸಂಸ್ಥೆಗಳು ಕಾರ್ಯನಿರ್ವಹಿಸುವ ವೈಖರಿಯನ್ನು ನೋಡಿರುವ, ಸ್ವತಃ ಅನುಭವಿಸಿರುವ ದೇಶದ ಶ್ರೀಸಾಮಾನ್ಯ ಇದಕ್ಕಿಂತ ಬೇರೆ ಅಭಿಪ್ರಾಯ ಹೊಂದಿರಲು ಸಾಧ್ಯವಿಲ್ಲ.

ಆಗರ್ಭ ಸಿರಿವಂತರೂ ಕೋವಿಡ್ ರೋಗದ ಮುಂದೆ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ. ನಿಸರ್ಗದ ಮುಂದೆ ಧನಕನಕ ನಗಣ್ಯ ಎಂಬುದು ಗೋಚರಿಸುತ್ತಿದೆ. ಈಗಲೂ ಹಣದ ಮೇಲಿನ ವಿಪರೀತ ಮೋಹ ಬಿಡದಿದ್ದರೆ ಇನ್ಯಾವಾಗ ಪಾಠ ಕಲಿಯುವುದು? ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಬದುಕುವುದು ಮತ್ತು ಇತರರಿಗೆ ಸಹೃದಯದಿಂದ ಸಹಾಯ ಮಾಡುವುದು ಮಾತ್ರ ನೆಮ್ಮದಿ ನೀಡಬಲ್ಲದು.
-ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.