ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸೆಮಿಸ್ಟರ್‌ ಪದ್ಧತಿ: ಸೂಕ್ತ ಚಿಂತನೆ ಅಗತ್ಯ

Last Updated 14 ಜುಲೈ 2020, 19:45 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣದಲ್ಲಿ ಸೆಮಿಸ್ಟರ್ ಪದ್ಧತಿಯು ಮರುಚಿಂತನೆ, ಮೌಲ್ಯಮಾಪನಕ್ಕೆ ಒಳಗಾಗಬೇಕೆಂಬ ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯವು (ಪ್ರ.ವಾ., ಜುಲೈ 13) ಜ್ಞಾನಾಸಕ್ತರಿಗೆ ಸ್ಫೂರ್ತಿಯಾಗಿದೆ. ಒಂದು ಸೆಮಿಸ್ಟರ್‌ನ 6 ತಿಂಗಳಲ್ಲಿ 2 ತಿಂಗಳು ಪರೀಕ್ಷೆ, ಮೌಲ್ಯಮಾಪನಕ್ಕೆ ವ್ಯಯವಾದರೆ, ಇನ್ನು 4 ತಿಂಗಳುಗಳು ದೊರಕುತ್ತವೆ.

ಈ 120 ದಿನಗಳಲ್ಲಿ ಸುಮಾರು 20 ದಿನಗಳನ್ನು ಭಾನುವಾರ, ಹಬ್ಬ ಹರಿದಿನಗಳಿಗಾಗಿ ತೆಗೆದರೆ, ಉಳಿದ 100 ದಿನಗಳಲ್ಲಿ,ಪ್ರತಿಭಟನೆಗಳು, ವಿದ್ಯಾರ್ಥಿಗಳ ಸ್ವಯಂಘೋಷಿತ ಬಂದ್, ರಜೆ ಮುಂತಾದವುಗಳಿಂದ 90 ದಿನ ಮಾತ್ರ ಬೋಧನೆಗೆ, ಕಲಿಕೆಗೆ ಸಿಗಬಹುದು.

ಈ ಅಲ್ಪ ಅವಧಿಯಲ್ಲಿ ದೀರ್ಘ ಅಧ್ಯಯನ, ಬೋಧನೆ ಸಾಧ್ಯವಾಗುತ್ತಿಲ್ಲ. ಸೆಮಿಸ್ಟರ್ ಪದ್ಧತಿ ಬಂದಮೇಲೆ ಪದವಿ ಪಡೆಯುವ, ಅಂಕ ಗಳಿಕೆಯ ಪ್ರಮಾಣ ಹೆಚ್ಚಾಗಿದೆ ನಿಜ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯ ಹಿನ್ನಡೆ ಕಾಣುತ್ತಿದೆ. ಅಂದರೆ ಸೀಮಿತ ವಿಷಯ ಬಿಟ್ಟು ಬೇರೆ ಅಧ್ಯಯನಕ್ಕೆ ಆಸ್ಪದವಾಗುತ್ತಿಲ್ಲ.

ವಾರ್ಷಿಕ ಪರೀಕ್ಷಾ ಪದ್ಧತಿ ಇದ್ದಾಗ ಮಾನವಿಕ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಂದಿದ್ದರು. ಆದರೆ ಪ್ರಸ್ತುತ ಈ ವಿಭಾಗದ ವಿದ್ಯಾರ್ಥಿಗಳು ಹಿನ್ನೆಲೆಗೆ ಬಂದಿದ್ದಾರೆ. ಆದ್ದರಿಂದ ಕೇವಲ ಅಂಕ ಗಳಿಕೆ ಬೇಕೋ ಜ್ಞಾನಸಾಗರ ಬೇಕೋ ಶಿಕ್ಷಣದಿಂದ ಭವಿಷ್ಯತ್ತನ್ನು ರೂಪಿಸಿಕೊಳ್ಳಬೇಕೋ ಎಂಬುದನ್ನೆಲ್ಲ ಸೂಕ್ತವಾಗಿ ಚಿಂತಿಸಿ, ಅದಕ್ಕೆ ಪೂರಕವಾಗಿ ಸ್ಪಂದಿಸಿದರೆ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿಸಲು ಸಾಧ್ಯ.
-ಡಾ. ಬಿ.ಪಿ.ಕುಮಾರ್,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT