ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ ನಿವಾರಿಸಿ

Last Updated 15 ಜನವರಿ 2020, 16:54 IST
ಅಕ್ಷರ ಗಾತ್ರ

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಶುಶ್ರೂಷಕರ ಸೇವೆಯನ್ನು ಕಾಯಂಗೊಳಿಸಲು ಈ ಹಿಂದೆ ಒಂದು ಸಬೂಬು ಕೇಳಿಬರುತ್ತಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ನೇತೃತ್ವದ ಸರ್ಕಾರಗಳು ಇರುವುದೇ ಅದಕ್ಕೆ ತೊಡಕು ಎಂಬುದು ಆ ಸಬೂಬು. ಈಗ ಅದನ್ನು ಹೇಳಲಾಗದು.ಎರಡೂ ಕಡೆ ಬಿಜೆಪಿ ನೇತೃತ್ವದ ಸರ್ಕಾರಗಳೇ ಇವೆ. ಇಂತಹ ಸಂದರ್ಭದಲ್ಲಾದರೂ ನಮ್ಮ ಕೆಲಸವನ್ನು ಕಾಯಂ ಮಾಡಲು ಕ್ರಮ ಜರುಗಿಸಲಿ.

ಹತ್ತು– ಹದಿನೈದು ವರ್ಷಗಳಿಂದ ಆರೋಗ್ಯ ಸೇವೆಯಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ. ಇಂದಲ್ಲ ನಾಳೆ ನಮ್ಮ ಹುದ್ದೆ ಕಾಯಂ ಆಗಬಹುದು ಎನ್ನುವ ಆಶಾಭಾವವೇ ಇದಕ್ಕೆ ಕಾರಣ. ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರು ಮಾಡುತ್ತಿರುವ ಒಂದೇ ರೀತಿಯ ಕೆಲಸಕ್ಕೆ ವೇತನದಲ್ಲಿ ಅಜಗಜಾಂತರ ಇದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿರುವ ಈಗಿನ ಕಾಲದಲ್ಲಿ ಬದುಕು ದುಸ್ತರವಾಗಿದೆ. ಹೀಗಾಗಿ, ಕಾಯಂ ಮಾಡಲು
ಆಗಲಿಲ್ಲವೆಂದರೆ, ಕೊನೆಯಪಕ್ಷ ವೇತನ ತಾರತಮ್ಯವನ್ನಾದರೂ ನಿವಾರಿಸಿ.

-ಲೀಲಾವತಿ ವಸಂತ್, ಈಶ್ವರಗೆರೆ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT