ಮಂಗಳವಾರ, ಏಪ್ರಿಲ್ 20, 2021
27 °C

ಬದುಕಿದ್ದಾಗ ಮನ ಮಿಡಿದಿದ್ದರೆ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಯಾವುದೇ ಪಗಾರ ಸಿಗದಿದ್ದರೂ ಹಲವು ವರ್ಷಗಳಿಂದ ಬೀದಿ ಗುಡಿಸುವ ಕೆಲಸವನ್ನು ಮಾಡುತ್ತಿದ್ದ ರಂಗಯ್ಯ ಎಂಬ ಪೌರಕಾರ್ಮಿಕ ಮೃತಪಟ್ಟಿದ್ದು, ಅವರಿಗೆ ಊರವರು ಸಕಲ ಮರ್ಯಾದೆಯೊಂದಿಗೆ ಅಂತಿಮ ವಿದಾಯ ಹೇಳಿದ್ದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 3). ಈ ಕಾರ್ಯಕ್ಕೆ ಆ ಊರಿನವರು ಅಭಿನಂದನಾರ್ಹರು. ಆದರೆ ರಂಗಯ್ಯ ಪಗಾರ ಇಲ್ಲದೆ ನಿಷ್ಠೆಯಿಂದ ದುಡಿಯುತ್ತಿದ್ದ ಸಂದರ್ಭದಲ್ಲಿ, ಅಂದರೆ ಬದುಕಿದ್ದಾಗ ಆತನಿಗೆ ಏನಾದರೂ ಆರ್ಥಿಕಾನುಕೂಲ ಕಲ್ಪಿಸಿದ್ದರೆ, ಊರವರು ಅವರ ಮೇಲೆ ಇಟ್ಟಿದ್ದ ಪ್ರೀತಿ ಸಾರ್ಥಕವಾಗುತ್ತಿತ್ತು.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.