ಶುಕ್ರವಾರ, ಏಪ್ರಿಲ್ 16, 2021
28 °C

ಔಚಿತ್ಯಪ್ರಜ್ಞೆ ಬೇಡವೇ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಮೇಶ್‌ ಜಾರಕಿಹೊಳಿ ಅವರ ಪ್ರಕರಣದಲ್ಲಿ ದೃಶ್ಯ ಮಾಧ್ಯಮಗಳು ವಿಡಿಯೊ ಪ್ರಸಾರ ಮಾಡಿದ ಔಚಿತ್ಯವನ್ನು ಮುಂದಿಟ್ಟು, ‘ಇಂತಹ ಅಪಸವ್ಯಕ್ಕೆ ಕೊನೆಯಿಲ್ಲವೇ?’ ಎಂದು ಆರ್‌.ವೆಂಕಟರಾಜು ಅವರು ಪ್ರಶ್ನಿಸಿರುವುದು (ವಾ.ವಾ., ಮಾರ್ಚ್ 5) ಸರಿಯಾಗಿಯೇ ಇದೆ. ಸ್ತ್ರೀ– ಪುರುಷರ ಸಮ್ಮಿಲನವು ತೀರಾ ವೈಯಕ್ತಿಕ ವಿಷಯ. ಇದನ್ನು ಚಿತ್ರೀಕರಿಸಿ ಮಾಧ್ಯಮಗಳ ಮುಖೇನ ಪ್ರಚಾರ ಮಾಡಿ ಪ್ರಸಿದ್ಧಿ ಅಥವಾ ಕುಪ್ರಸಿದ್ಧಿ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ರಮೇಶ್‌ ಅವರ ಪ್ರಕರಣದಲ್ಲಿ ಕೆಲವು ದೃಶ್ಯ ಮಾಧ್ಯಮಗಳು ಔಚಿತ್ಯದ ಎಲ್ಲೆ ದಾಟಿವೆ.  ತಾವೇ ಕೋರ್ಟ್, ಪೊಲೀಸ್ ಎಂಬಂತೆ ವರ್ತಿಸಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿವೆ. ಪುರುಷ ಮತ್ತು ಸ್ತ್ರೀ ಸಮ್ಮಿಲನವನ್ನು ಗುಟ್ಟಾಗಿ ಚಿತ್ರೀಕರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವಂತಹ ಪಿತೂರಿಗಳಿಗೆ ಕಡಿವಾಣ ಹಾಕಲು ಕಾಯ್ದೆ–ಕಟ್ಟಲೆಗಳಲ್ಲಿ ಅವಕಾಶ ಇಲ್ಲವೇ?

- ಬಿ.ರಮೇಶ್, ಬೆಂಗಳೂರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.