ಮಂಗಳವಾರ, ಏಪ್ರಿಲ್ 13, 2021
32 °C

ಜಾತಿಗಣತಿ ವರದಿ: ಸಮಸ್ಯೆಗೆ ಮದ್ದು

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಸರ್ಕಾರ ಸ್ವೀಕರಿಸಿ ಅಲ್ಲಿನ ಅಂಶಗಳನ್ನು ಬಹಿರಂಗಗೊಳಿಸಿದರೆ, ಈಗ ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಲು ಸಹಾಯಕ ವಾಗುತ್ತದೆ ಎಂದು ವಿಧಾನಪರಿಷತ್ತಿನಲ್ಲಿ ಇತ್ತೀಚೆಗೆ ಪಕ್ಷಭೇದವಿಲ್ಲದೆ ಹಲವು ಸದಸ್ಯರು ಒಕ್ಕೊರಲಿನಿಂದ ಹೇಳಿರುವುದು ಸಮಯೋಚಿತವಾಗಿದೆ.

ಯಾವ ಯಾವ ಸಮುದಾಯಗಳು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗಗಳಲ್ಲಿ ಹಿಂದುಳಿದಿವೆ ಮತ್ತು ಮುಂದುವರಿದಿವೆ ಎಂಬ ನಿಜಾಂಶ ಈ ವರದಿಯಿಂದ ಹೊರಬೀಳುತ್ತದೆ. ಆಗ ನಿಜಕ್ಕೂ ಹಿಂದುಳಿದ ಸಮುದಾಯಗಳಿಗೆ ವೈಜ್ಞಾನಿಕವಾಗಿ ಮೀಸಲಾತಿಯನ್ನು ಪುನರ್ ನಿಗದಿಗೊಳಿಸಲು ಮತ್ತು ಪ್ರವರ್ಗಗಳನ್ನು ಹೊಸದಾಗಿ ಕಲ್ಪಿಸಲು ಅನುಕೂಲವಾಗುತ್ತದೆ. ಆ ಮೂಲಕ, ಈಗ ಎದ್ದಿರುವ ಮೀಸಲಾತಿ ಬೇಡಿಕೆಯ ಹೋರಾಟಕ್ಕೆ ಸೂಕ್ತ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಜಾತಿ ಜನಗಣತಿ ವರದಿಯನ್ನು ಸರ್ಕಾರ ಶೀಘ್ರವೇ ಬಹಿರಂಗಪಡಿಸಿ, ಈಗ ಸೃಷ್ಟಿಯಾಗಿರುವ ಮೀಸಲಾತಿಯ ಗೊಂದಲಕ್ಕೆ ತೆರೆ ಎಳೆಯುವುದು ಸಮಂಜಸ.

- ಸಿ.ಪಿ.ಸಿದ್ಧಾಶ್ರಮ, ಮೈಸೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.