ಭಾನುವಾರ, ಆಗಸ್ಟ್ 1, 2021
27 °C

ವಾಚಕರವಾಣಿ | ಎನ್‌ಕೌಂಟರ್‌ನಿಂದ ಕ್ಷೀಣಿಸುತ್ತಿದೆ ಸತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚಿನ ದಿನಗಳಲ್ಲಿ ಸತ್ಯ ಮರೆಮಾಚುವ ಸರಳ ವಿಧಾನವೆಂದರೆ ಎನ್‌ಕೌಂಟರ್‌ ಎಂಬಂತಾಗಿದೆ. ದೇಶದಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಹಂಗಿನಲ್ಲಿ ಬದುಕುವ ಕೆಲವು ಪುಡಿ ರೌಡಿಗಳು, ಗ್ಯಾಂಗ್‌ಸ್ಟರ್‌ಗಳು ಹೀನ ಕೃತ್ಯಕ್ಕೆ ಮುಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಾಗ, ನ್ಯಾಯದೇವತೆಯ ಬಾಗಿಲು ತಟ್ಟುವ ಮುನ್ನವೇ ಜೀವ ಕಳೆದು ಕೊಳ್ಳುತ್ತಿದ್ದಾರೆ. ಕಾಣದ ಕೈಗಳ ಒತ್ತಡಕ್ಕೆ ಮಣಿದು ವ್ಯವಸ್ಥೆಯು ಎನ್‌ಕೌಂಟರ್ ಎನ್ನುವ ಅಸ್ತ್ರಕ್ಕೆ ಶರಣಾಗುತ್ತಿದೆ.

ಸಮಾಜಕಂಟಕರ ಮೂಲಕ ಅವರ ಹಿಂದಿರುವ ಪ್ರಭಾವಿಗಳ ಮುಖವಾಡ ಕಳಚಿಬೀಳುವ ಮುನ್ನವೇ ಅಂತಹ ಅವಕಾಶವು ಕೊನೆಯಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಕೊನೆಗಾಣಿಸಲು ಸೂಕ್ತವಾದ ಕಾನೂನು ರೂಪಿಸಬೇಕಾಗಿದೆ. ಈ ಮೂಲಕ ಸಮಾಜದ ಮುಂದೆ ಸತ್ಯಾಸತ್ಯತೆಯು ಅನಾವರಣವಾಗುವ ದಾರಿ ಸುಗಮವಾಗಬೇಕಾಗಿದೆ.

–ಸಾಗರ್ ದ್ರಾವಿಡ್, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು